ಕಟೀಲು ದೇವಳದಲ್ಲಿ ಲಲಿತಾ ಪಂಚಮಿ ಸಂಭ್ರಮ ,ಮಹಿಳಾ ಭಕ್ತರಿಗೆ ಶೇಷವಸ್ತ್ರ(ಸೀರೆ)ವಿತರಣೆ
Saturday, September 27, 2025
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಯುಕ್ತ ಶನಿವಾರ ಲಲಿತಾ ಪಂಚಮಿಯ ದಿನದಂದು ದೇವಳದ ವತಿಯಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಮಹಿಳಾ ಭಕ್ತರಿಗೆ ಶೇಷ ವಸ್ತ್ರವನ್ನಾಗಿ ಸೀರೆಯನ್ನು ಹಂಚಲಾಯಿತು.
ಸಂಜೆ ಮೂರರಿಂದಲೇ ಭಕ್ತರು ಸರದಿಸಾಲಿನಲ್ಲಿ ನಿಂತಿದ್ದು, ಐದು ಗಂಟೆಯಿಂದ ವಿತರಣೆ ಆರಂಭಗೊಂಡು ತಡರಾತ್ರಿಯವರೆಗೂ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು.
ಪ್ರಸ್ತುತ ವರ್ಷದಲ್ಲಿ ಸುಮಾರು 44 ಸಾವಿರದಷ್ಟು ಶೇಷವಸ್ತ್ರವನ್ನು ವಿತರಿಸಲು ಪೂರ್ವಬಾವಿಯಾಗಿ ದೇವಳವು ಸಜ್ಜಾಗಿತ್ತು.
ಭಕ್ತರ ಸಾಲಿಗಾಗಿ ನೂಕು ನುಗ್ಗಲು ಆಗದಿರುವಂತೆ ಮುಂಭಾಗದಲ್ಲಿ ಅಟ್ಟಳಿಗೆಯನ್ಬು ಅಳವಡಿಸಲಾಗಿದ್ದರಿಂದ ಭಕ್ತರು ನೇರವಾಗಿ ಅನ್ನದಾನದ ಛತ್ರದಲ್ಲಿ ಶೇಷವಸ್ತ್ರವನ್ನು ವಿತರಿಸುವುದರೊಂದಿಗೆ ಅನ್ನದಾನದ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು.