ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಸಿದ್ಧತೆ ಸಭೆ, ಸಮಿತಿ ರಚನೆ
Monday, September 15, 2025
ಹಳೆಯಂಗಡಿ : ಕಾರಣಿಕ ಕ್ಷೇತ್ರ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆಯು ಸೆ.14 ರ ಭಾನುವಾರದಂದು ಸಂಜೆ ಶ್ರೀ ಕ್ಷೇತ್ರದ ಆವರಣದಲ್ಲಿ ನಡೆಯಿತು.
ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ್ ಆರ್. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2026 ನೇ ಫೆಬ್ರವರಿ 8ರಿಂದ 10 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ನೇಮೋತ್ಸವದ ಅಂಗವಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪರಮಾನಂದ ವಿ ಸಾಲಿಯಾನ್, ಆಡಳಿತ ಸಮಿತಿಯ ಕೋಶಾಧಿಕಾರಿ ಎಸ್. ದಯಾನಂದ ಗುರಿಕಾರ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶ್ರೀಧರ್ ಸುವರ್ಣ, ಪಟೇಲ್ ಕಾಂತು ಲಕ್ಕಣ ಯಾನೆ ಯಾದವ ಬಂಗೇರ ಮನೆತನದ ನೀಲಾಧರ ಬಂಗೇರ, ದಾಮೋದರ ಪೂಜಾರಿ, ಸುರೇಶ್ ಪೂಜಾರಿ, ಮುಂಬೈ ಸಮಿತಿಯ ಚಂದ್ರಕಾಂತ್ ಸಾಲ್ಯಾನ್, ರಾಜೇಶ್ ಅಳ್ವೆಕೋಡಿ, ಮಾಧ್ಯಮ ಸಮಿತಿಯ ಯಶೋಧರ ಕೋಟ್ಯಾನ್, ಆಡಳಿತ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಶಕುಂತಲಾ ಭೋಜ ಬಂಗೇರ, ಜೀರ್ಣೋದ್ಧಾರ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪ ದಯಾನಂದ ಮತ್ತಿತರರು ಹಾಗೂ ಸಸಿಹಿತ್ಲು ಗ್ರಾಮದ ನಾಲ್ಕುಕರೆಯ ಭಕ್ತಾದಿಗಳು ಉಪಸ್ಥಿತರಿದ್ದರು.