ಪುರಾಣ ಪ್ರಸಿದ್ಧ ಸಸಿಹಿತ್ಲು ಭಗವತೀ ದೇವಸ್ಥಾನದ ಆಡಳಿತ ಮುಕ್ತೇಸರರಾಗಿ ಚಂದ್ರಶೇಖರ್ ಬೆಳ್ಚಡ ಗಂಪ ಮನೆ ಕಟೀಲು
Monday, September 1, 2025
ಹಳೆಯಂಗಡಿ:ಈ ವರ್ಷ ಬ್ರಹ್ಮಕಲಶದ ಪರ್ವ ಕಾಲದಲ್ಲಿ ಇರುವ ಪುರಾಣ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಮುಕ್ತೇಸರರಾಗಿ ಮುಂಬೈ ತೀಯಾ ಸಮಾಜದ ಮಾಜಿ ಅಧ್ಯಕ್ಷ, ಅಮೇರಿಕಾದ ಅಕ್ಕಾ ಸಮ್ಮೇಳನದ ಪ್ರಶಸ್ತಿ ವಿಜೇತರಾದ ಸಮಾಜಮುಖಿ ಚಿಂತಕ, ಕೊಡುಗೈದಾನಿ ಚಂದ್ರಶೇಖರ್ ಬೆಳ್ಚಡ ಗಂಪ ಮನೆ ಕಟೀಲು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪತ್ರಿಕಾ ಗೋಷ್ಟ್ಠಿಯಲ್ಲಿ ಸಸಿಹಿತ್ಲು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಾಮನ್ ಇಡ್ಯಾ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಅನುವಂಶಿಕ ಮುಕ್ತೇಸರರೂ ಆಗಿರುವ ಶ್ರೀನಿವಾಸ ಯಾನೆ ಅಪ್ಪು ಪೂಜಾರಿಯವರು ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಮಾರ್ಚ್ 4 ರಿಂದ 8 ತಾರೀಕಿನ ತನಕ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಏಪ್ರಿಲ್ 10 ರಂದು ನಡಾವಳಿ ಮಹೋತ್ಸವ ಹಾಗು ಏಪ್ರಿಲ್ 11 ರಿಂದ ಒಂದು ವಾರಗಳ ಕಾಲ ಭರಣಿ ಮಹೋತ್ಸವ ನಡೆಯಲಿದೆ. ನೂತನ ಆಡಳಿತ ಮುಕ್ತೇಸರರ ಮುಂದಾಳತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿವೆ ಎಂದು ಎಳೂರ ಗುರಿಕಾರರು ದೇವಸ್ಥಾನದ ಟ್ರಸ್ಟಿಗಳು ಭರವಸೆ ವ್ಯಕ್ತಪಡಿಸಿ ನೂತನ ಆಡಳಿತ ಮುಕ್ತೇಸರರಿಗೆ ಶುಭ ಹಾರೈಸಿದ್ದಾರೆ.