Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಕ್ಕಾರು:ವಿಜೃಂಭಣೆಯ ಪುದ್ದರ್ದ ಮೆಚ್ಚಿ ನೇಮೋತ್ಸವ

ಬಜಪೆ:ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ  ಪುದ್ದರ್ದ ಮೆಚ್ಚಿ ನೇಮೋತ್ಸವವು  ಶನಿವಾರ ರಾತ್ರಿ  ಎಕ್ಕಾರು ಬೊಳ್ಳಿ ಅಶ್ವತ್ಥ ಮರದಡಿಯ ಕೊಡಿಯಡಿಯಲ್ಲಿ ವಿಜೃಂಭಣೆಯಿಂದ ಜರುಗಿತು.ಅಂದು ಸಂಜೆ ಎಕ್ಕಾರು ಕಾವರಮನೆಯಿಂದ ಶ್ರೀದೈವಗಳ ಭಂಡಾರ ಹೊರಟು ರಾತ್ರಿ ನೇಮೋತ್ಸವವು ಜರುಗುತ್ತದೆ. 
ಈ ಸಂದರ್ಭ  ಎಕ್ಕಾರು ಶ್ರೀಗೋಪಾಲಕೃಷ್ಣಮಠದ  ಮೊಕ್ತೇಸರ  ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮ ಕಾವರು),ಭಾಸ್ಕರ ಮುದ್ದ ನಡ್ಯೋಡಿಗುತ್ತು,ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ರಮೇಶ್ ಭಂಡಾರಿ  ಮಿತ್ತೋಟ್ಟು ಬಾಳಿಕೆ ಮೇಲೆಕ್ಕಾರು,4 ಕರೆ 32 ವರ್ಗ ,ಊರಹತ್ತು ಸಮಸ್ತರು  ಉಪಸ್ಥಿತರಿದ್ದರು.