ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ
Saturday, August 9, 2025
ಕಿನ್ನಿಗೋಳಿ : ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಆ. 6ರಂದು ಸಂಘದ ಸಭಾಭವನದಲ್ಲಿ ನವೀನ್ ಶೆಟ್ಟಿ ನಲ್ಯಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಮಂಗಳೂರಿನ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ್, ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಯಶವಂತ್ , ಸಂಘದ ಉಪಾಧ್ಯಕ್ಷ ಸತೀಶ್ ಸತೀಶ್ .ಜೆ ಶೆಟ್ಟಿ. ನಿರ್ದೇಶಕರುಗಳಾದ ಬಾಲಕೃಷ್ಣದೇವಾಡಿಗ, ಚಂದ್ರಹಾಸ್ .ಎಂಶೆಟ್ಟಿ, ಸತೀಶ್ .ಎಂ ಶೆಟ್ಟಿ. ಹರೀಶ್ ಕುಮಾರ್, ರಾಜೇಶ್ ಶೆಟ್ಟಿ, ಶ್ರೀಮತಿ ಮೀರಾ, ಶ್ರೀಮತಿ ಉಷಾ, ಶ್ರೀಮತಿ ವೇದಾವತಿ, ಶ್ರೀಮತಿ ರೇಷ್ಮಾ, ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಮಾಜಿ ಕಾರ್ಯದರ್ಶಿ ಗಣೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ನಿರ್ದೇಶಕ ಸತೀಶ್ ಎಂ ಶೆಟ್ಟಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಜಗದೀಶ್ ಶೆಟ್ಟಿ ವರದಿ ವಾಚಿಸಿದರು. ಅಮಿತಾ ದೇವಾಡಿಗ ವಂದಿಸಿದರು.
ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.