ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ
Saturday, August 9, 2025
ಬಜಪೆ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮಹಿಳಾ ನಾಯಕಿ, ಕಂದಾವರ ಗ್ರಾ ಪಂ ನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ರವರ ನೇತೃತ್ವದಲ್ಲಿ ಬಜಪೆ ಸಮೀಪದ ಮುರ ನಗರದ ಅರಸು ವೃತ್ತದ ಸಮೀಪ ಹೊಂಡಗಳಿಂದ ಹದಗೆಟ್ಟ ರಸ್ತೆಗೆ ಶ್ರಮದಾನದ ಮೂಲಕ ತಾತ್ಕಲೀಕವಾಗಿ ಹೊಂಡಗಳನ್ನು ಕಲ್ಲು ಮಣ್ಣುಗಳನ್ನು ಹಾಕಿ ಮುಚ್ಚಿದರು. ಶ್ರಮದಾನಕ್ಕೆ ಮುರ ನಗರದ ಆಟೋ ಚಾಲಕ -ಮಾಲಕರು ಹಾಗೂ ಮುರ ನಗರದ ನಾಗರಿಕರು ಸಾಥ್ ನೀಡಿದರು .