-->
ಮುಲ್ಕಿ:ಅಭಿವೃದ್ಧಿಗೆ ಒತ್ತು -ಶಾಸಕ ಉಮಾನಾಥ ಕೋಟ್ಯಾನ್

ಮುಲ್ಕಿ:ಅಭಿವೃದ್ಧಿಗೆ ಒತ್ತು -ಶಾಸಕ ಉಮಾನಾಥ ಕೋಟ್ಯಾನ್

ಮುಲ್ಕಿ: ಮುಲ್ಕಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ನಾಡ್  ಗಾಂಧಿ ಮೈದಾನದಲ್ಲಿ ನಡೆಯಿತು
ಮುಲ್ಕಿ ತಾಲೂಕು ತಹಶಿಲ್ದಾರ್ ಶ್ರೀಧರ ಮುಂದಲಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸೌಹಾರ್ದತೆ ಸಹಬಾಳ್ವೆ ಆತ್ಮಭಿಮಾನ ಜೀವನದಲ್ಲಿ ಅಳವಡಿಸಿಕೊಂಡು ಯುವ ಜನಾಂಗ ದೇಶದ ಒಗ್ಗಟ್ಟಿಗೆ ಶ್ರಮಿಸಬೇಕಾಗಿದೆ ಎಂದರು
ಮುಖ್ಯ ಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮುಲ್ಕಿ ತಾಲೂಕು ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ಶೀಘ್ರದಲ್ಲಿ ತಾಲೂಕು ವ್ಯಾಪ್ತಿಯ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿ ಕಲ್ಪಿಸುವ ನೂತನವಾಗಿ ನಿರ್ಮಾಣಗೊಂಡ ಬಹುಕೋಟಿ ವೆಚ್ಚದ ಪ್ರಜಾ ಪ್ರಜಾಸೌಧ , ನೂತನ ಪ್ರವಾಸಿ ಮಂದಿರ ಲೋಕಾರ್ಪಣೆ ನಡೆಯಲಿದೆ. ಸುಮಾರು 258 ಕೋಟಿ ವೆಚ್ಚದ ಮುಲ್ಕಿ ಮೂಡಬಿದ್ರೆ ಕ್ಷೆತ್ರದಲ್ಲಿ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮಗಳಲ್ಲಿ ಜಲ್ ಜೀವನ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ನಾಡ್ ನಿಂದ ಕಾರ್ನಾಡ್ ಬೈ ಪಾಸ್ ರಸ್ತೆ ದುರಸ್ತಿಗೆ ಒಂದು ಕೋಟಿ ಮಂಜೂರಾಾಗಿದ್ದು ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಶುರುವಾಗಲಿದೆ ಅಭಿವೃದ್ಧಿಯೇ ಮೂಲ ಧ್ಯೇಯ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್,ಮಾಜೀ ಅಧ್ಯಕ್ಷ ಸುನಿಲ್ ಆಳ್ವ,ಉಪಾಧ್ಯಕ್ಷೆ  ಲಕ್ಷ್ಮಿ,ಮುಖ್ಯಾಧಿಕಾರಿ ಮಧುಕರ್, ಸದಸ್ಯರಾದ ವಿಮಲಾ ಪೂಜಾರಿ, ಪುತ್ತು ಬಾವ, ಹರ್ಷರಾಜ ಶೆಟ್ಟಿ, ದಯಾವತಿ ಅಂಚನ್, ಶೈಲೇಶ್ ಕುಮಾರ್, ರಾಧಿಕಾ ಕೋಟ್ಯಾನ್, ಸುಭಾಷ್ ಶೆಟ್ಟಿ, ಉಪತಹಶಿಲ್ದಾರ್ ದಿಲೀಪ್ ರೋಡ್ಕರ್ ,ವಿಲ್ಮಾ ರಸ್ಕಿನ,
ಮುಲ್ಕಿ ಪೊಲೀಸ ಇನ್ಸ್ಪೆಕ್ಟರ್ ಮಂಜುನಾಥ್ ಬಿ ಎಸ್, ಸಬ್ ಇನ್ಸ್ಪೆಕ್ಟರ್ ಉಮೇಶ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್,  ಕ್ಷೇತ್ರ ಸಂಪನ್ಮೂಲ ಅಧಿಕಾರಿ ವೇದಾವತಿ, ಪಶುವೈದ್ಯಾಧಿಕಾರಿ
ಡಾ.ವಿಶ್ವರಾಧ್ಯ, ವಿಜಯ ಕಾಲೇಜು, ಪ್ರಾಂಶುಪಾಲ ವೆಂಕಟೇಶ್ ಭಟ್, ನಿವೃತ್ತ ಹೋಮ್ ಗಾರ್ಡ್ ಮನ್ಸೂರ್, ವೈದ್ಯಾಧಿಕಾರಿ ಡಾ. ಸುನಿಲ್ ಜತ್ತನ್ನ, ನಿವೃತ್ತ ಯೋಧ ಎಂಬಿ ಖಾನ್ ,ಮತ್ತಿತರರು ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು 
ಮುಲ್ಕಿ ಸರಕಾರಿಜೂನಿಯರ್ ಕಾಲೇಜ್ ವಾಸುದೇವ ಬೆಳ್ಳೆ ಸ್ವಾಗತಿಸಿದರು,ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಧನ್ಯವಾದ ಅರ್ಪಿಸಿದರು 
 ವಕೀಲರಾದ ಭಾಸ್ಕರ ಹೆಗ್ಡೆ ನಿರೂಪಿಸಿದರು
ಬಾಕ್ಸ್ ಮಾಡಬಹುದು..........
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ.....
ಮುಲ್ಕಿಗೆ ಮಂಜೂರಾದ ಅಗ್ನಿಶಾಮಕ ದಳದ ಘಟಕವನ್ನು ಸರಕಾರ ಏಕಾಏಕಿ ಉಳ್ಳಾಲ ಕ್ಷೇತ್ರಕ್ಕೆ ವರ್ಗಾಯಿಸಿದೆ. ಇದು ನನ್ನ ಕ್ಷೇತ್ರಕ್ಕೆ ಸರಕಾರ ಮಾಡಿದ ಅನ್ಯಾಯ,ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೋತ್ತರದಲ್ಲಿ ರಾಜ್ಯ ಗೃಹ ಸಚಿವರ ಬಳಿ ಧ್ವನಿ ಎತ್ತಿದ್ದು ನೂತನ ಅಗ್ನಿಶಾಮಕ ದಳದ ಘಟಕ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ(ಚಿತ್ರ ಇದೆ-ಸ್ವಾತಂತ್ರ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು)
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ