ಕಟೀಲಿನಲ್ಲಿ ಸ್ವಾತಂತ್ರ್ಯೋತ್ಸವ, ಆನೆಯಿಂದ ಧ್ವಜವಂದನೆ
Friday, August 15, 2025
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಟೀಲು ರಥಬೀದಿಯಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.
ಧ್ವಜಾರೋಹಣ ನಡೆಸಿದ ನಿವೃತ್ತ ಅಧಿಕಾರಿ, ಭಾರತೀಯ ವಾಯು ಸೇನೆ ಹಾಗೂ ಕಟೀಲಿನ ಹಳೆ ವಿದ್ಯಾರ್ಥಿ ದೇವೀಕುಮಾರ್ ಕೆ.ಬಿ. ಮಚ್ಚಾರು ಮಾತನಾಡಿ, ಸೇನೆಗೆ ಸೇರುವುದರಿಂದ ದೇಶ ಸೇವೆ ಮಾಡುವ ಸೌಭಾಗ್ಯ ಸಿಗುವುದಷ್ಟೇ ಅಲ್ಲದೆ, ಉತ್ತಮ ಸವಲತ್ತುಗಳಿರುವ ಉದ್ಯೋಗವೂ ಆಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದ ಹೋರಾಟಗಾರರನ್ನು ಸದಾ ನೆನಪಿಸಿಕೊಳ್ಳುವುದಲ್ಲದೆ, ಭಾರತಕ್ಕೆ ನಮ್ಮಿಂದಾದ ಕೊಡುಗೆ ನೀಡುವುದರೊಂದಿಗೆ ಅವರ ತ್ಯಾಗ, ಬಲಿದಾನಗಳಿಗೆ ಗೌರವ ಸಲ್ಲಿಸುವ ಕರ್ತವ್ಯವೂ ಇದೆ ಎಂದರು.
ಶಾಲೆಯ ಎನ್‌ಸಿಸಿ, ಸ್ಕೌಟ್ಸ್, ರೇಂಜರ‍್ಸ್ ವಿವಿಧ ತಂಡಗಳಿಂದ ಪಥಸಂಚಲನ, ಧ್ವಜವಂದನೆ ಸಲ್ಲಿಸಲಾಯಿತು.
ಕಟೀಲು ದೇಗುಲದ ಆನೆ ಮಹಾಲಕ್ಷ್ಮೀ ಧ್ವಜವಂದನೆ ನಡೆಸಿ ಎಲ್ಲರ ಗಮನ ಸೆಳೆಯಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್‌ಚಂದ್ರ ಶೆಟ್ಟಿ, ಪ್ರವೀಣ್‌ದಾಸ ಭಂಡಾರಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ್ ವಿ, ಕುಸುಮಾವತಿ, ರಾಜಶೇಖರ್, ಗಿರೀಶ ತಂತ್ರಿ, ಚಂದ್ರಶೇಖರ ಭಟ್, ಸರೋಜಿನಿ ಮತ್ತಿತರರಿದ್ದರು. ಪ್ರದೀಪ್ ಹಾವಂಜೆ, ಪುಂಡಲೀಕ ಕೊಠಾರಿ ನಿರೂಪಿಸಿದರು.