-->
ವಿಜ್ಞಾನ ಅಧ್ಯಯನದಲ್ಲಿ ಪ್ರಯೋಗಶೀಲತೆ ಅತ್ಯಂತ ಪ್ರಮುಖ ಅಂಶ: ಸುರೇಶ್ ಶೆಟ್ಟಿ ನಡಿಯಾಲ್ ಗುತ್ತು

ವಿಜ್ಞಾನ ಅಧ್ಯಯನದಲ್ಲಿ ಪ್ರಯೋಗಶೀಲತೆ ಅತ್ಯಂತ ಪ್ರಮುಖ ಅಂಶ: ಸುರೇಶ್ ಶೆಟ್ಟಿ ನಡಿಯಾಲ್ ಗುತ್ತು

ಕಿನ್ನಿಗೋಳಿ:ವಿಜ್ಞಾನ ಅಧ್ಯಯನದಲ್ಲಿ ಪ್ರಯೋಗಶೀಲತೆ ಅತ್ಯಂತ ಪ್ರಮುಖ ಅಂಶವಾಗಿದ್ದು, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಾಗದೆ ಸ್ವತಃ ಪ್ರಯೋಗಗಳ ಮೂಲಕ ಕಲಿಯಬೇಕು ಎಂದರು. ಇದೇ ವೇಳೆ ಕ್ರೀಡಾ ಸಾಮಗ್ರಿಗಳ ವಿತರಣೆ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಶ್ರೀ ಮಹಾಮಾಯಿ ದೇವಸ್ಥಾನ, ಶ್ರೀ ಕೊರ್ದಬು ದೈವಸ್ಥಾನ ಎಳತ್ತೂರು ಪಡ್ಲಾಕ್ಯರಿನ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಶೆಟ್ಟಿ ನಡಿಯಾಲ್ ಗುತ್ತು ತಿಳಿಸಿದರು. 
ಇವರು ಎಳತ್ತೂರಿನ ನಡಿಯಾಲು ಗುತ್ತಿನ ದಿ. ರತಿ ಶೆಟ್ಟಿ ಇವರ 25ನೆ ವರ್ಷದ ಸಂಸ್ಮರಣೆಯ ಅಂಗವಾಗಿ, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಗೆ ವಿಜ್ಞಾನ ಪ್ರಯೋಗಾಲಯದ ಪರಿಕರಗಳ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭ ಪ್ರಮುಖ ದಾನಿಗಳಾಗಿ ಭಾಗವಹಿಸಿ ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿ ಕೆ ಭುವನಾಭಿರಾಮ ಉಡುಪ , ಕ್ರೀಡೆಗಳು ತಂಡಭಾವನೆ, ಶಿಸ್ತು ಹಾಗೂ ಆರೋಗ್ಯವನ್ನು ಬಲಪಡಿಸುತ್ತವೆ. ಇವುಗಳೊಂದಿಗೆ ವಿಜ್ಞಾನ ಪರಿಕರಗಳು ಅಧ್ಯಯನವನ್ನು ಹೆಚ್ಚು ಆಕರ್ಷಕ ಹಾಗೂ ಅನುಭವಾತ್ಮಕವಾಗಿಸುತ್ತವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ, ದಾನಿಗಳಾದ ಶಾಲಾ ಹಿರಿಯ ವಿದ್ಯಾರ್ಥಿ ಮುಂಬೈ ನ ಉದ್ಯಮಿ ಶಶಿಧರ ಶೆಟ್ಟಿ ನಡಿಯಾಲ್ ಗುತ್ತು,  ಹೇಮಲತಾ ಶಶಿಧರ ಶೆಟ್ಟಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಸುಮನ ಉಪಸ್ಥಿತರಿದ್ದರು. 
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೂಡ ಇದರ ಅಂಗವಾಗಿ ಹಮ್ಮಿಕೊಳ್ಳಲಾಯಿತು.

ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು  ಸ್ವಾಗತಿಸಿ, ಪ್ರಾಂಶುಪಾಲ ಜಿತೇಂದ್ರ ವಿ ರಾವ್ ವಂದಿಸಿದರು,  ಸಹ ಶಿಕ್ಷಕಿ ನಿಶ್ಮಿತ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ