ಕಿನ್ನಿಗೋಳಿ : ಯಕ್ಷಗಾನ ಕಲಾವಿದ, ಪ್ರಸಾದನ ಪರಿಣತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಅವರ ೨೬ನೆಯ ಸಂಸ್ಮರಣೆ ಕಾರ್ಯಕ್ರಮ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಿತು. ಇವರ ನೆನಪಿನಲ್ಲಿ ಯಕ್ಷಗಾನ ಕಲಾವಿದ, ಪ್ರಸಾದನ ಕಲಾವಿದ ಕೇಶವ ಶಕ್ತಿನಗರ ಇವರನ್ನು ಯಕ್ಷದಾಮೋದರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾಸ್ಕರ ಶೆಟ್ಟಿಗಾರ ಉಡುಪಿ, ಭುವನಾಭಿರಾಮ ಉಡುಪ. ಮೋಹನದಾಸ್ ಶೆಟ್ಟಿಗಾರ್ ಕಾವೂರು, ಪ್ರಭಾಕರ ಪೂಜಾರಿ ದುಬೈ, ಮೋಹಿನಿ ಶೆಟ್ಟಿಗಾರ್, ಸದಾಶಿವ ಶೆಟ್ಟಿಗಾರ್, ಶೇಖರ ಶೆಟ್ಟಿಗಾರ ಮತ್ತಿತರರಿದ್ದರು. ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ನಡೆಯಿತು.