ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶಿಲಾ ಮುಹೂರ್ತ ಹಾಗೂ ದಾರು ಶಿಲ್ಪದ ಮಹೂರ್ತ
Tuesday, August 19, 2025
ಹಳೆಯಂಗಡಿ: ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದ ಶ್ರೀ ವೀರಭದ್ರ ದೇವರ ಗರ್ಭಗುಡಿ ಹಾಗೂ ತೀರ್ಥ ಮಂಟಪದ ಜೀರ್ಣೋದ್ಧಾರದ ಅಂಗವಾಗಿ ಶಿಲಾ ಮುಹೂರ್ತ ಕಾರ್ಯಕ್ರಮ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಕ್ಷೇತ್ರದ ಅರ್ಚಕರಾದ ಶ್ರೀ ಕೃಷ್ಣ ಭಟ್ ಉಪಸ್ಥಿತಿಯಲ್ಲಿ ಮಂಗಳೂರಿನ ಉದ್ಯಮಿ ಎಮ್ ರವೀಂದ್ರ ಶೇಟ್ ನೆರವೇರಿಸಿದರು.
ದ. ಕ.ಜಿಲ್ಲಾ ಪದ್ಮಶಾಲಿ ಮಹಾ ಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ ರವರು ದಾರು ಶಿಲ್ಪದ ಮಹೂರ್ತವನ್ನು ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ವಿಜ್ಞಾಪನಾಪತ್ರ ಬಿಡುಗಡೆ, ನಡೆಯಿತು
ಈ ಸಂದರ್ಭ ವಾಸ್ತುತಜ್ಞ ಅವಧಾನಿ ಸುಬ್ರಹ್ಮಣ್ಯ ಭಟ್,
ಕ್ಷೇತ್ರದ ಗುರಿಕಾರರಾದ ಪಿ ಲಕ್ಷ್ಮಣ ಗುರಿಕಾರ, ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್,ಅಪ್ಪು ಗುರಿಕಾರ ಪಕ್ಷಿಕೆರೆ, ಉಮಾನಾಥ ಜೆ ಶೆಟ್ಟಿಗಾರ್, ಇಂಜಿನಿಯರ್ ಭಗವಾನ್ ದಾಸ್, ಶಂಕರ್ ಶೆಟ್ಟಿಗಾರ್ ಬೆಳ್ಳಾಯರು, ಪೀತಾಂಬರ ಶೆಟ್ಟಿಗಾರ ಸಾಗು , ಪುರಂದರ ಶೆಟ್ಟಿಗಾರ್, ಗ್ರಾ ಪಂ.ಸದಸ್ಯ ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು
ಗೀತಾ ಸದಾನಂದ ತೋಕೂರು ನಿರೂಪಿಸಿದರು