ಸೈಂಟ್ ಮೇರೀಸ್ ವಿಶೇಷ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
Saturday, August 16, 2025
ಕಿನ್ನಿಗೋಳಿ : ಇಲ್ಲಿನ ಸೈಂಟ್ ಮೇರೀಸ್ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು. ಸೈಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿಯ ಕಿನ್ನಿಗೋಳಿ ಶಾಖೆಯ ವತಿಯಿಂದ ಮಕ್ಕಳಿಗೆ ಉಡುಗೊರೆಗಳನ್ನು ನೀಡಲಾಯಿತು. ಸಿಹಿತಿಂಡಿಗಳನ್ನು ವಿತರಿಸಲಾಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಯಶಂಕರ್, ಮೂಲ್ಕಿ ಠಾಣೆಯ ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್, ಎ.ಎಸ್.ಐ ಹರಿಶೇಖರ್, ಶಾಲಾ ಸಂಚಾಲಕರಾದ ವಂದನೀಯ ಫಾದರ್ ಜೋಕಿಂ ಫೆರ್ನಾಂಡಿಸ್, ಮಿಲಾಗ್ರಿಸ್ ಸೊಸೈಟಿಯ ಕಿನ್ನಿಗೋಳಿ ಬ್ರಾಂಚ್ ಮೆನೇಜರ್ ಶ್ರೀಮತಿ ಮನಿಷಾ ರೈ, ಲಿಯೋ ಮಾಸ್ಕರಿನಸ್, ಶ್ರೀಮತಿ ಹಿಲ್ಡಾ ಡಿಸೋಜಾ, ಶಾಲಾ ಪಾಲನ ಸಮಿತಿ ಉಪಾಧ್ಯಕ್ಷ ಗುರುರಾಜ ಭಟ್, ಕಾರ್ಯದರ್ಶಿ ಶ್ರೀಮತಿ ಶೈಲಾ ಸಿಕ್ವೇರಾ, ಕಿನ್ನಿಗೋಳಿ ಚರ್ಚಿನ ಉಪಾಧ್ಯಕ್ಷ ವಿಲಿಯಂ ಡಿಸೋಜಾ
ಕಿನ್ನಿಗೂಳಿ ಚರ್ಚಿನ ಕಾರ್ಯದರ್ಶಿ ಮೈಕಲ್ ಪಿಂಟೋ, ಜೋಸೆಫ್ ಕ್ವಾಡ್ರಸ್ ಜೊರೋಮ್ ಮೊರಸ್, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.