-->
ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಮಂಗಳೂರು ಉತ್ತರ ವಲಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಮಂಗಳೂರು ಉತ್ತರ ವಲಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ,ಕಟೀಲು, ಪಕ್ಷಿಕೆರೆ, ನೀರುಡೆ, ನಿಡ್ಡೋಡಿ,ಕಿರೆಂ ಹಾಗೂ ಬಳ್ಕುಂಜೆ ಚರ್ಚ್ ಗಳನ್ನೊಳಗೊಂಡ ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಮಂಗಳೂರು ಉತ್ತರ ವಲಯದ ಪ್ರತಿಭಾ ಪುರಸ್ಕಾರ ಕಾರ್ಯಾಕ್ರಮವು ಆ. 15 ರಂದು ಕಿನ್ನಿಗೋಳಿಯ  ಚರ್ಚ್ ಸಭಾಭವನದಲ್ಲಿ ನಡೆಯಿತು.
ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಓಸ್ವಾಲ್ಡ್ ಮೊಂತೆರೊರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯದ ಅಧ್ಯಕ್ಷ ಸ್ಟ್ಯಾನಿ ಮಿರಾಂದರವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸದ  ಕು . ಮಿಶೆಲ್ ಕ್ವೀನಿ ಡಿ ಕೋಸ್ತ  ಐ ಅರ್ ಎಸ್ ರವರು  ವಿದ್ಯಾರ್ಥಿಗಳಿಗೆ ಸಿವಿಲ್ ಸೇವಾ ಪರೀಕ್ಷೆಗಳ ಮಹತ್ವ ಹಾಗೂ ಸೂಕ್ತ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.


ವಲಯದ ಏಳು ಚರ್ಚ್ ಗಳ ಎಸ್ ಎಸ್ ಎಲ್ ಸಿ  ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ, ಎಂ ಬಿ ಬಿ ಎಸ್ ,ಸಿಎ  ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ   ರ್ಯಾಂಕ್  ಹಾಗೂ ಬಂಗಾರದ ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭ  ಗೌರವಿಸಲಾಯಿತು.ಹಾಗೂ ವಿವಿಧ ಕ್ಷೇತ್ರಗಳಲ್ಲಿ  ಸಾಧನೆಗೈದ ಸಾಧಕರನ್ನು  ಅಭಿನಂದಿಸಲಾಯಿತು.
  
 ಈ ಸಂದರ್ಭ  ಕಿನ್ನಿಗೋಳಿ ಚರ್ಚ್ ನ ಧರ್ಮ ಗುರು  ವಂದನೀಯ ಜೋಕಿಮ್ ಫೆರ್ನಾಂಡಿಸ್, ಕಿನ್ನಿಗೋಳಿ ಪಾಲನಾ ಸಮಿತಿ ಉಪಾಧ್ಯಕ್ಷ  ವಿಲಿಯಂ ಡಿ ಸೋಜ, ಕಾರ್ಯದರ್ಶಿ ಮೈಕೆಲ್ ಪಿಂಟೊ, ವಲಯದ ನಿಕಟ ಪೂರ್ವ ಅಧ್ಯಕ್ಷ ಕು.ಮೆಲ್ರೀಡ ಜೇನ್ ರೊಡ್ರಿಗಸ್ ಕೋಶಾಧಿಕಾರಿ ಜೋನ್ ಕಿಶೋರ್ ಡಿ ಸೋಜ ಉಪಸ್ಥಿತರಿದ್ದರು.
      ವಲಯಾಧ್ಯಕ್ಷ  ಸ್ಟ್ಯಾನಿ ಮಿರಾಂದ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಗ್ರೆಟ್ಟಾ ಫೆರ್ನಾಡಿಸ್ ವಂದಿಸಿದರು.ಶ್ರೀಮತಿ ಶಾಂತಿ ಮೇಬಲ್ ಮಾರ್ಟಿಸ್ ಕಾರ್ಯಾಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ