ಕಿನ್ನಿಗೋಳಿ ಯುಗಪುರುಷ ವಲಯದ ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ರಾಯರ ಆರಾಧನಾ ಮಹೋತ್ಸವ
Tuesday, August 12, 2025
ಕಿನ್ನಿಗೋಳಿ : ರಾಘವೇಂದ್ರ ಸ್ವಾಮೀಜಿಗಳು ಓರ್ವ ಯುಗಪುರುಷ, ಅವರು ಧಾರ್ಮಿಕತೆಯ ಜತೆಗೆ ಸಮಾಜದ ಅಭಿವೃದ್ಧಿಯ ಹರಿಕಾರರಾಗಿದ್ದರು. ಅವರ ಆರಾಧನೆ ಮಾಡುವುದು ಒಂದು ಯಜ್ಞದಂತೆ, ಅದರ ಫಲ ಸಮಾಜಕ್ಕೆ ದೊರೆಯಬೇಕು ಎಂದು ಡಾ| ಪದ್ಮನಾಭ ಭಟ್ ಹೇಳಿದರು. ಅವರು ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ರಾಯರು ಪವಾಡ ಪುರುಷ, ಕಲಿಯುಗದ ಕಾಮಧೇನು, ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾನುಭಾವ, ಅವರ ಆರಾಧನೆ ಉತ್ಸವ ಆಗಬೇಕು ಎಂದರು.
ಡಾ| ನಯನಾಭಿರಾಮ ಉಡುಪ, ಬಾಲಕೃಷ್ಣ ಉಡುಪ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಪು. ಗುರುಪ್ರಸಾದ ಭಟ್, ಅರ್ಚಕ ರಾಘವೇಂದ್ರ ಭಟ್, ಯುವರಾಜ ಶೆಟ್ಟಿ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಕೆ. ಭುವನಾಭಿರಾಮ ಉಡುಪ ಪ್ರಸ್ತಾಪಿಸಿ ಸ್ವಾಗತಿಸಿದರು. ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವದ ಅಂಗವಾಗಿ ಪಲ್ಲಕಿ ಉತ್ಸವ, ರಥೋತ್ಸವ ನಡೆಯಿತು.