ರಾಮ್ ಫ್ರೆಂಡ್ಸ್ (ರಿ. ಕಟೀಲ್ ಸೇವಾ ತಂಡದ 6ನೇ ವರ್ಷದ ಸಂಭ್ರಮಾಚರಣೆ,ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮ
Tuesday, August 12, 2025
ಕಟೀಲು:ರಾಮ್ ಫ್ರೆಂಡ್ಸ್( ರಿ) ಕಟೀಲು ತಂಡದ 6ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮವು ನಮ್ಮ ಹಿರಿಯರ ಮನೆ ಆಶ್ರಮ ಸ್ನೇಹ ಭಾರತಿ ವಿದ್ಯಾ ಸಂಸ್ಥೆ (ರಿ) ಗುಡ್ಡೆಯಂಗಡಿ ಅರಳ ಬಂಟ್ವಾಳ ತಾಲೂಕಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಂಜಿತ್ ಪೂಜಾರಿ ತೋಡಾರು ಉದ್ಘಾಟಿಸಿ ಶುಭ ಹಾರೈಸಿದರು. ಈ ವೇಳೆ ವೃದ್ಧಾಶ್ರಮಕ್ಕೆ ಅಗತ್ಯವಿರುವ 20ಸಾವಿರ ಮೌಲ್ಯದ ವಸ್ತುಗಳು, 2 ಅಶಕ್ತ ಕುಟುಂಬಕ್ಕೆ 20 ಸಾವಿರ ರೂ ಸಹಾಯಧನ ಹಸ್ತಾಂತರಿಸಲಾಯಿತು.ನಿರಂತರ ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಸೇವಾ ತಂಡಗಳನ್ನು ಗೌರವಿಸಲಾಯಿತು. ಈ ಸಂದರ್ಭ ಪ್ರಶಾಂತ್ ಕುಮಾರ್ ಕಾನ, ವಿಕಾಸ್. ಕೆ. ಬೆಂಗಳೂರು, ರಾಮನಗೌಡ ಸಿ ಗ್ವಾತಗಿ, ರಾಮ್ ಫ್ರೆಂಡ್ಸ್ ರಿ ಕಟೀಲು ತಂಡದ ಸ್ಥಾಪಕಧ್ಯಕ್ಷ ರಮಾನಂದ ಪೂಜಾರಿ ಕಟೀಲು ,ತಂಡದ ಪದಾಧಿಕಾರಿಗಳು, ನಿಸ್ವಾರ್ಥ ಸೇವಾ ಬಂಧುಗಳು ಉಪಸ್ಥಿತರಿದ್ದರು. ತಂಡದ ಅಧ್ಯಕ್ಷ ಸುಮಂತ್ ಸುವರ್ಣ ಬಡಗಮಿಜಾರು ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮ ನಿರೂಪಿಸಿದರು.