ಕಟೀಲು ವಲಯ ಶಿವಳ್ಳಿ ಸ್ಪಂದನದಿಂದ ಪ್ರತಿಭಾ ಪುರಸ್ಕಾರ
Tuesday, August 5, 2025
ಕಟೀಲು : ಶೈಕ್ಷಣಿಕ ಸಾಧನೆಯೊಂದಿಗೆ ಉನ್ನತ ಉದ್ಯೋಗಗಳ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯರ್ ಹೇಳಿದರು.
ಅವರು ಕಟೀಲು ವಲಯ ಶಿವಳ್ಳಿ ಸ್ಪಂದನದ ವತಿಯಿಂದ ಕೈಯೂರು ಶ್ರೀ ರಾಘವೇಂದ್ರ ಮಠದಲ್ಲಿ ಶಿವಳ್ಳಿ ಸ್ಪಂದನ ಕಟೀಲು ವಲಯದ ವತಿಯಿಂದ ವಿಶೇಷ ಪೂಜೆ ಹಾಗೂ ನಾಲ್ಕನೆಯ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಸಾಧಕ ವಿದ್ಯಾರ್ಥಿಗಳಾದ ಶರಣ್ಯ, ಅಮೋಘವರ್ಷ, ಶ್ರದ್ಧಾ, ರಮ್ಯಾ ಇವರನ್ನು ಅಭಿನಂದಿಸಲಾಯಿತು.
ಶಿವಳ್ಳಿ ಸ್ಪಂದನ ಅಧ್ಯಕ್ಷ ಅನಂತಪದ್ಮನಾಭ ಆಚಾರ್, ರಾಮಚಂದ್ರ ಉಡುಪ, ಅರವಿಂದ ಭಟ್, ಪ್ರಮೀಳಾ ಆಚಾರ್ಯ, ಜಗದೀಶ ರಾವ್, ರಾಘವೇಂದ್ರ ಭಟ್, ವಿಜಯದಾಸ ಆಚಾರ್ಯ, ಹಂಸಿನಿ ಉಡುಪ, ಪ್ರದೀಪ್ ರಾವ್, ಗೀತಾ ಭಟ್, ವಸಂತಿ ಭಟ್, ಸಂತೋಷ್ ಭಟ್, ಗುರುರಾಜ ಉಡುಪ, ಸುರೇಶ್ ರಾಜ್, ಸುನಿಲ್ ಭಟ್, ಕವಿತಾ ಭಟ್ ಚೆನ್ನಕೇಶವ ಭಟ್, ಯಾದವ ಭಟ್ ಸುಧೀಂದ್ರ ಉಡುಪ, ಭರತ್ ರಾವ್ ಮತ್ತಿತರರಿದ್ದರು.
ಕುಲ್ಲಂಗಾಲು ಅನಂತ ಭಟ್, ಆದರ್ಶ ಭಟ್ ಮೂಲ್ಕಿ ಇವರಿಂದ ದಾಸಗಾಯನ ನಡೆಯಿತು.