ಗಿಡಗಳಿಗೆ ಕಸಿ ಕಟ್ಟುವ ತರಬೇತಿ
Tuesday, August 5, 2025
ಕಟೀಲು : ಒಂದೇ ಗಿಡದಲ್ಲಿ ಮೂರು ಬಣ್ಣದ ಹೂವುಗಳು, ಮೂರು ನಮೂನೆಯ ಹೂವುಗಳು, ಒಂದೇ ಗಿಡದಲ್ಲಿ ಎರಡು ಮೂರು ಜಾತಿಯ ಹಣ್ಣುಗಳು, ಉತ್ತಮ ಇಳುವರಿ ಹೀಗೆ ಗಿಡಗಳಿಗೆ ಕಸಿಕಟ್ಟುವುದರಿಂದ ಕೃಷಿಯಲ್ಲಿ ಹೊಸತನ ಕಾಯ್ದುಕೊಳ್ಳಬಹುದು. ಪ್ರಯೋಗಶೀಲತೆಯ ಕೃಷಿ ನಮ್ಮಲ್ಲೂ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಕಡಂದಲೆಯ ನಿವೃತ್ತ ಶಿಕ್ಷಕ ಶಂಕರನಾರಾಯಣ ರಾವ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಇಂಗ್ಲಿಷ್ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಗಿಡಗಳಿಗೆ ಕಸಿಕಟ್ಟುವ ತರಬೇತಿ ನೀಡಿದರು.
ಕಟೀಲು ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿ ರಾಜೇಶ್ ಆಚಾರ್ಯ ಚಾಲನೆ ನೀಡಿದರು. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ರಾಜಶೇಖರ್ ಎನ್, ಗಿರೀಶ್ ತಂತ್ರಿ, ಹಳೆ ವಿದ್ಯಾರ್ಥಿ ಸಂಘದ ಮಿಥುನ ಕೊಡೆತ್ತೂರು, ಶಿಕ್ಷಕರಾದ ಪೃಥ್ವೀಶ್ ಕರಿಕೆ, ಉಮೇಶ್ ನೀಲಾವರ, ಶ್ರೀವತ್ಸ ಮತ್ತಿತರರಿದ್ದರು.