ಹಳೆಯಂಗಡಿ:ಕೊಪ್ಪಲ ಕರಿತೋಟ ಕಾಂಕ್ರೀಟ್ ರಸ್ತೆಯ ಉದ್ಘಾಟನೆ
Tuesday, August 26, 2025
ಹಳೆಯಂಗಡಿ: ಸುಮಾರು 10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹಳೆಯಂಗಡಿ ಗ್ರಾ ಪಂ ವ್ಯಾಪ್ತಿಯ ಕೊಪ್ಪಲ ಕರಿತೋಟ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ನೆರವೇರಿಸಿದರು.
ಈ ಸಂದರ್ಭ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಮಾಜಿ ಜಿ ಪಂ ಸದಸ್ಯ ವಿನೋದ್ ಬೋಳೂರು, ಮಾಜಿ ತಾ ಪಂ ಸದಸ್ಯ ಜೀವನ ಪ್ರಕಾಶ್, ಹಿರಿಯರಾದ ಸತೀಶ್ ಭಟ್ ಕೊಳುವೈಲು, ಸಾಧು ಪೂಜಾರಿ ವಜ್ರದುಂಬಿ, ಸದಾಶಿವ ಅಂಚನ್ ಚಿಲಿಂಬಿ, ಜಗದೀಶ್ ಪಲಿಮಾರು, ಸುಂದರ ಕರಿತೋಟ, ಮೋಹನ್ ಸುವರ್ಣ, ಮೋಹನ್ ಅಮೀನ್,ಸುರೇಶ್, ಸುಜಾತ, ಸಂತೋಷ್ ಕೊಳುವೈಲು ಹಾಗೂ ಪಂಚಾಯತ್ ಉಪಾಧ್ಯಕ್ಷರು ಸದಸ್ಯರು, ಗ್ರಾಮಸ್ಥರು ಉಪಸ್ತಿತರಿದ್ದರು.