ಬಜ್ಪೆ:ಎಸ್ಯಾಸಾಫ್ಟ್‍ನಿಂದ ಅತ್ಯಾಧುನಿಕ ಕಲಿಕೆ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ
Tuesday, August 26, 2025
ಬಜಪೆ : ಇಂಧನ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವ ಎಸ್ಯಾಸಾಫ್ಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ತನ್ನ ಅತ್ಯಾಧುನಿಕ ಕಲಿಕೆ ಮತ್ತು ಸಾಮಥ್ರ್ಯ ಅಭಿವೃದ್ಧಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಿದ್ದು,ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮನಾಥ್ ಕೋಟ್ಯಾನ್ ಅವರು ಎಸ್ಯಾಸಾಫ್ಟ್ ಕಲಿಕೆ ಮತ್ತು ಅಭಿವೃದ್ಧಿ ಸಾಮಥ್ರ್ಯ ಕೇಂದ್ರವನ್ನು ಮಂಗಳೂರಿನ ಬಜ್ಪೆಯಲ್ಲಿ ಉದ್ಘಾಟಿಸಿದರು. ಕಂಪನಿಯ ಸ್ಥಾಪಕ ಮತ್ತು ಸಿಇಒ ಶ್ರೀ ಬಿಪಿನ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ,ದ.ಕ ಜಿಲ್ಲಾಧಿಕಾರಿ ಹೆಚ್ .ವಿ ದರ್ಶನ್ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಹಾಗೂ ಕಂದಾವರ ಗ್ರಾ.ಪಂ ಅಧ್ಯಕ್ಷೆ ಶಾಲಿನಿ,ಕಂಪನಿಯ ಜಾಗತಿಕ ಎಚ್‍ಆರ್ ಮುಖ್ಯಸ್ಥೆ ಮರಿಸಾ ತಲಮೋಂತಿ ಉಪಸ್ಥಿತರಿದ್ದರು.