-->
ಕಿನ್ನಿಗೋಳಿ:ವಿಜಯಾ ಕಲಾವಿದರ 'ಮನಿಪಂದೆ ಕುಲ್ಲಡೆ 'ತುಳು ನಾಟಕದ ಮುಹೂರ್ತ

ಕಿನ್ನಿಗೋಳಿ:ವಿಜಯಾ ಕಲಾವಿದರ 'ಮನಿಪಂದೆ ಕುಲ್ಲಡೆ 'ತುಳು ನಾಟಕದ ಮುಹೂರ್ತ


ಕಿನ್ನಿಗೋಳಿ:ಗ್ರಾಮೀಣ ಭಾಗದಲ್ಲಿದ್ದುಕೊಂಡು ವರ್ಷಕ್ಕೆ ನೂರಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿ ಮಹಾರಾಷ್ಟ್ರ, ಕೇರಳ, ಗುಜರಾತ್ ಸಹಿತ ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಅನೇಕ ಕಡೆಗಳಲ್ಲಿ ನಾಟಕ ಪ್ರದರ್ಶನ ನೀಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಕಿನ್ನಿಗೋಳಿ ವಿಜಯಾ ಕಲಾವಿದರ ಹೊಸ ನಾಟಕ ಮನಿಂಪದೆ ಕುಲ್ಲಡೆ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ.ಅಭುವನಾಭಿರಾಮ ಉಡುಪ ಹೇಳಿದರು. 
ಅವರು ಕಿನ್ನಿಗೋಳಿಯ ಯುಗಪುರುಷದ ಶ್ರೀ ರಾಘವೇಂದ್ರ ಸನ್ನಿಧಾನದಲ್ಲಿ ವಿಜಯಾ ಕಲಾವಿದರ ಮನಿಪಂದೆ ಕುಲ್ಲಡೆ ನೂತನ ತುಳು ನಾಟಕದ ಮುಹೂರ್ತ ನೆರವೇರಿಸಿ ಮಾತನಾಡಿದರು.
ತಂಡದ ಸಂಚಾಲಕ ಸಾಯಿನಾಥ ಶೆಟ್ಟಿ ಮುಂಡ್ಕೂರು ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ನಾಟಕ ಪ್ರದರ್ಶನದೊಂದಿಗೆ ಜಾಗೃತಿ ಮೂಡಿಸುವ ಕಥೆಯನ್ನು ಹಾಸ್ಯದ ಮಿಶ್ರಣದೊಂದಿಗೆ ಕಲಾವಿದರು ಪ್ರಾಮಾಣಿಕವಾಗಿ ತಮ್ಮ ಕಲಾ ಸೇವೆಯನ್ನು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ತಂಡವಾದರೂ ಅತಿ ಹೆಚ್ಚು ಪ್ರದರ್ಶನ ನೀಡುತ್ತಿರುವ ಸಂಸ್ಥೆಯಾಗಿ ಬೆಳೆದಿದೆ ಎಂದರು. 
ಕಿನ್ನಿಗೋಳಿ ವಿಜಯಾ ಕಲಾವಿದರ ಅಧ್ಯಕ್ಷ ಮುಂಡ್ಕೂರು ದೊಡ್ಡಮನೆ ಶರತ್ ಶೆಟ್ಟಿ ಮಾಹಿತಿ ನೀಡಿ, ಹರೀಶ್ ಪಡುಬಿದ್ರಿ ರಚನೆಯ ಮನಿಪಂದೆ ಕುಲ್ಲಡೆ ತುಳು ನಾಟಕವನ್ನು ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶಿಸಲಿದ್ದಾರೆ. ಸಂಗೀತ ದಿನೇಶ್ ಪಾಪು ಮುಂಡ್ಕೂರು, ರಂಗವಿನ್ಯಾಸ ಹಾಗೂ ಧ್ವನಿ-ಬೆಳಕನ್ನು ಸುರೇಶ್ ಸಾಣೂರು, ಗೀತಾ ಸಾಹಿತ್ಯವನ್ನು ಅಶೋಕ್ ಪಳ್ಳಿ ನೀಡಲಿದ್ದಾರೆ, ಪ್ರಥಮ ಪ್ರದರ್ಶನವನ್ನು ಆಗಸ್ಟ್ 27ರಂದು ಪಕ್ಷಿಕೆರೆ-ಪಂಜದಲ್ಲಿ ನೀಡಲಿದ್ದೇವೆ, ಜನವರಿಯಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಪ್ರಕಾಶ ಎಂ. ಶೆಟ್ಟಿ ಸುರತ್ಕಲ್ ಇವರ ಸಂಚಾಲಕತ್ವದಲ್ಲಿ ಪ್ರವಾಸ ನಡೆಯಲಿದೆ ಎಂದರು. 
ಕೊಡೆತ್ತೂರು ಗುತ್ತುವಿನಲ್ಲಿ ನಾಟಕದ ಪೋಸ್ಟರ್‌ನ್ನು ಗುತ್ತಿನಾರ್ ನಿತಿನ್ ಶೆಟ್ಟಿ ಕೊಡೆತ್ತೂರು ಲೋಕಾರ್ಪಣೆಗೊಳಿಸಿದರು. 
ಸಮಾಜ ಸೇವಕದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಉದ್ಯಮಿ ಮುಂಬೈ ಸದಾಶಿವ ಪೂಜಾರಿ ಏಳಿಂಜೆ, ಅನುಗ್ರಹ ಪೃಥ್ವಿರಾಜ್ ಆಚಾರ್ಯ, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ತಾಳಿಪಾಡಿಗುತ್ತು ಉದಯ ಪೂಂಜಾ, ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ, ಕಿನ್ನಿಗೋಳಿ ಸಜ್ಜನ ಬಂಧುಗಳು ಸಂಘಟನೆಯ ದಾಮೋದರ ಶೆಟ್ಟಿ ಕೊಡೆತ್ತೂರು ಗುತ್ತು, ಅರುಣ್ ಶೆಟ್ಟಿ ಕೊಡೆತ್ತೂರು ಗುತ್ತು, ಹರೀಶ್ ಶೆಟ್ಟಿ ಏಳಿಂಜೆ, ಸಮಾಜ ಸೇವಕಿ ಸರೋಜಿನಿ ಅಂಚನ್ ಮಧ್ಯ, ನಾಟಕ ರಚನೆಕಾರ ಹರೀಶ್ ಪಡುಬಿದ್ರಿ, ಸಂಗೀತ ನಿರ್ದೇಶಕ ದಿನೇಶ್ ಪಾಪು ಮುಂಡ್ಕೂರು, ಕಲಾವಿದರಾದ ನರೇಂದ್ರ ಕೆರೆಕಾಡು, ಕಾಪೇಡಿಗುತ್ತು ಸೀತಾರಾಮ ಶೆಟ್ಟಿ ಎಳತ್ತೂರು, ಭಗವಾನ್ ಸುರತ್ಕಲ್, ಚಿತ್ರಾ ಸುರತ್ಕಲ್, ಶಶಿ ಗುಜರನ್ ಪಡುಬಿದ್ರಿ, ಉದಯಕುಮಾರ್ ಹಳೆಯಂಗಡಿ, ಭಾಸ್ಕರ ಕುಲಾಲ್ ಪಕ್ಷಿಕೆರೆ, ರಾಜೇಶ್ ಅಮೀನ್ ಕಡಂದಲೆ, ಸತೀಶ್ ಪಿಲಾರ್, ಕೃತಿಕಾ ಉಲ್ಲಂಜೆ, ದೀಕ್ಷಿತಾ ಕೆರೆಕಾಡು, ಮಂಜೂಷಾ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ತಂಡದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ. ಏಳಿಂಜೆ ಸ್ವಾಗತಿಸಿದರು, ಪ್ರಕಾಶ್ ಆಚಾರ್ಯ ವಂದಿಸಿದರು, ಸುಧಾಕರ ಸಾಲ್ಯಾನ್ ಸಂಕಲಕರಿಯ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ