-->
ಕಷ್ಟ ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ - ಶಾಸಕ ಉಮಾನಾಥ ಕೋಟ್ಯಾನ್

ಕಷ್ಟ ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ - ಶಾಸಕ ಉಮಾನಾಥ ಕೋಟ್ಯಾನ್

ಚೇಳ್ಯಾರು :ಇಂದಿನ ವಿದ್ಯಾರ್ಥಿಗಳು ಭಾರತ ದೇಶದ ಭವಿಷ್ಯ ರೂಪಿಸುವವರಾಗಿದ್ದಾರೆ ವೈಯಕ್ತಿಕವಾಗಿ ಹಾಗೂ ದೇಶದ ಯಶಸ್ವಿಗೆ ಸವಾಲುಗಳು ಅಗತ್ಯವಾಗಿದೆ.ಪ್ರತಿ ಸೋಲುಗಳು ಹೊಸ ಗೆಲುವಿಗೆ ಮೆಟ್ಟಿಲಾಗಿದೆ. ಕಷ್ಟ ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು  ಮೂಲ್ಕಿ ಮೂಡಬಿದ್ರೆ ಶಾಸಕ  ಉಮಾನಾಥ ಕೋಟ್ಯಾನ್  ಹೇಳಿದರು.ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚೇಳ್ಯಾರು  ಇಲ್ಲಿಗೆ ಎಂ,ಅರ್,ಪಿ,ಎಲ್ ಸಂಸ್ಥೆಯ ವತಿಯಿಂದ ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ 2  ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಎಂ,ಅರ್,ಪಿ,ಎಲ್ ಸಂಸ್ಥೆಯು ಸರಕಾರಿ ಶಾಲೆಗೆ ಹೆಚ್ಚು ಅನುದಾನವನ್ನು ನೀಡುತ್ತಿರುವುದು ಶ್ಲಾಘನೀಯ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇಳ್ಯಾರು  ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ವಹಿಸಿದ್ದರು.
ಈ ಸಂದರ್ಭ  ಮಂಗಳೂರು ತಾ.ಪಂ  ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ,ಎಂ,ಅರ್,ಪಿ,ಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀನಿವಾಸ್,ಇಂಜಿನಿಯರ್ ಪವಿತ್ರ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಖಾ,ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮಾಜಿ ತಾ.ಪಂ   ಸದಸ್ಯೆ  ವಜ್ರಾಕ್ಷಿ ಪಿ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ,ಪ್ರಾಥಮಿಕ ಶಾಲೆಯ ಶಾರದ ವಿದ್ಯಾ ಟ್ರಸ್ಟ್ ಅಧ್ಯಕ್ಷೆ ವೀಣಾ ಶೆಟ್ಟಿ ,ಕಾರ್ಯದರ್ಶಿ ಚಂದ್ರಶೇಖರ್ ಹೆಬ್ಬಾರ್,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಅಮೀನ್,ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜ್ಯೋತಿ ಚೇಳ್ಯಾರು, ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ತೆರೇಸಾ ವೇಗಸ್,ಅಂಗನವಾಡಿ ಶಿಕ್ಷಕಿ ವಂದನಾ  ಗುತ್ತಿಗೆದಾರ ವೆಂಕಟೇಶ್ ಶೆಟ್ಟಿ ,ಪ್ರಮುಖರಾದ ದಿವಾಕರ ಸಾಮಾನಿ,ರಮೇಶ್ ಪೂಜಾರಿ , ಶ್ರೀನಿವಾಸ್ ಅಮೀನ್,ಸುರೇಶ್ ಸಾಲ್ಯಾನ್, ವಿಶ್ವನಾಥ ಅಚಾರ್ಯ, ಭುಜಂಗ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ, ಸದಾನಂದ ರೈ,ಅಚ್ಚುತ ಅಚಾರ್ಯ, ಚರಣ್ ಕುಮಾರ್,ಸಂತೋಷ್ ಅಮೀನ್,ಭಾಸ್ಕರ್,ಕಿರಣ್ ಶೆಟ್ಟಿ ಕೆರೆಮನೆ,ಸುಕೇಶ್ ಶೆಟ್ಟಿ, ನಿತಿನ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಪ್ರಭಾಕರ ಶೆಟ್ಟಿ ಮಧ್ಯ,ಜಯರಾಮ ಅಚಾರ್ಯ, ಚಂದ್ರಶೇಖರ್ ಶೆಟ್ಟಿಮುಂತಾದವರು ಉಪಸ್ಥಿತರಿದ್ದರು. ಶಾಲಾ  ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ