-->
‘ದಿಶಾ’  ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ

‘ದಿಶಾ’ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ

ಕಿನ್ನಿಗೋಳಿ:ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಮಂಗಳೂರು ಉತ್ತರ ವಲಯದ ವತಿಯಿಂದ  ವಲಯದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ‘ದಿಶಾ’ ಎಂಬ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರವು ದಾಮಸ್ಕಟ್ಟೆಯ  ಕಿರೆಂ  ಚರ್ಚ್ ನ  ದ್ವಿಶತಮಾನೋತ್ಸವ ಸಭಾಂಗಣದಲ್ಲಿ  ಆಯೋಜನೆಗೊಂಡಿತು. ಕಾರ್ಯಕ್ರಮದಲ್ಲಿ ವಲಯದ 8 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಸಿವಿಲ್ ಸೇವೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸರ್ಕಾರಿ ಉದ್ಯೋಗಗಳ ಕುರಿತು ಮಾಹಿತಿಗಳನ್ನು  ನೀಡಲಾಯಿತು. 
ಕಿನ್ನಿಗೋಳಿ ಚರ್ಚ್ ನ  ಧರ್ಮಗುರು ವಂದನೀಯ ಫಾ. ಜೋಕಿಂ ಫೆರ್ನಾಂಡಿಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಸಂದೇಶ ನೀಡಿದರು. ಕಥೊಲಿಕ್‌ ಸಭಾ ಮಂಗಳೂರು ಉತ್ತರ ವಲಯಾಧ್ಯಕ್ಷ  ಸ್ಟ್ಯಾನಿ ಮಿರಾಂದಾ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. 
 ಈ ಸಂದರ್ಭ  ಆಂಟನಿ ಎಸ್. ಮರಿಯಪ್ಪ ಡಿ.ಸಿ.ಎಫ್ ಮಂಗಳೂರು ಇವರನ್ನು ಸನ್ಮಾನಿಸಲಾಯಿತು. ದಾಯ್ಜಿ ವರ್ಲ್ಡ್ ಸಂಸ್ಥಾಪಕ  ವಾಲ್ಟರ್ ನಂದಳಿಕೆ ಅವರು  ಸರ್ಕಾರಿ ಉದ್ಯೋಗಗಳ ಬಗ್ಗೆ ವಿದ್ಯಾರ್ಥಿಗಳ ಪ್ರಯತ್ನ ಹಾಗೂ ಪೋಷಕರ ಪಾತ್ರದ ಮಹತ್ವವನ್ನು ವಿವರಿಸಿದರು. ಸೈಂಟ್ ಅಲೋಶಿಯಸ್ ಸಿವಿಲ್ ಸೇವೆ ಕಾಲೇಜಿನ ಸಿಬ್ಬಂದಿ ಶರತ್ ಕುಮಾರ್, ಬೆಂಗಳೂರು ಇನ್ ಸೈಟ್ ಐಎಎಸ್ ಸಿಬ್ಬಂದಿ  ನವೀನ್ ಪಾಟೀಲ್ ಜಿ. ಯವರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ  ಕಿರೆಂ ಚರ್ಚಿನ ಆಡಳಿತ ಮಂಡಳಿಯ ಉಪಾಧ್ಯಕ್ಷ  ಹಾಗೂ  ಕಥೊಲಿಕ್ ಸಭಾ ಕಿರೆಂ ಘಟಕದ ಅಧ್ಯಕ್ಷ  ರೋಹನ್ ಡಿಕೋಸ್ತಾ, ವಲಯ ಖಜಾಂಚಿ  ಜೋನ್ ಕಿಶೋರ್ ಡಿಸೋಜ, ವಲಯ ನಿಕಟ ಪೂರ್ವ ಅಧ್ಯಕ್ಷೆ ಕುಮಾರಿ ಮೆಲ್ರೀಡ ಜೇನ್ ರೊಡ್ರಿಗಸ್  ಹಾಗೂ  ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.  ಶಿಬಿರದಲ್ಲಿ 350 ಜನರು ಭಾಗವಹಿಸಿದ್ದರು.


ಮಂಗಳೂರು ಉತ್ತರ ವಲಯ ಅಧ್ಯಕ್ಷ  ಸ್ಟ್ಯಾನಿ  ಮಿರಾಂದಾ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಗ್ರೆಟ್ಟಾ ಫೆರ್ನಾಂಡಿಸ್ ವಂದಿಸಿದರು. ಶ್ರೀಮತಿ ಅನಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ