-->
ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಉತ್ತಮ ಕಾರ್ಯಕ್ರಮ - ಉಮಾನಾಥ ಕೋಟ್ಯಾನ್

ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಉತ್ತಮ ಕಾರ್ಯಕ್ರಮ - ಉಮಾನಾಥ ಕೋಟ್ಯಾನ್

ಬಜಪೆ: ಹಿಂದಿನ ಕಾಲದಲ್ಲಿ ತುಳುವರಿಗೆ ಆಟಿ ತಿಂಗಳು ತುಂಬಾ ಕಷ್ಟದ ಸಮಯವಾಗಿತ್ತು.ಕೃಷಿ ಬದುಕಿನ ಮಧ್ಯೆ ಬಡತನದ ಮಧ್ಯೆಯೂ ಸಂಸ್ಕಾರಯುತ ಜೀವನ ನಡೆಸುತ್ತಿದ್ದರು.ವಿದ್ಯಾಭ್ಯಾಸದ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಕಳೆದ ಆರು ವರ್ಷದಿಂದ ಈ ಆಟಿಡೊಂಜಿ ದಿನ ಕಾರ್ಯ ನಡೆಸುತ್ತಿರುವ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು
ಹಳೆ ವಿದ್ಯಾರ್ಥಿ ಸಂಘ (ರಿ) ಕರಂಬಾರು. 
ದ.ಕ.ಜಿ.ಪ.ಹಿ.ಪ್ರಾ ಶಾಲೆ ಕರಂಬಾರು.
ಶಾಲಾಭಿವೃದ್ಧಿ ಸಮಿತಿ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀಮತಿ ವೀಣಾ ಶೆಟ್ಟಿ ಅವರು  ನಿಜವಾಗಿಯೂ ಮಕ್ಕಳಿಗೆ  ಹಳ್ಳಿ ಬದುಕಿನ ಸಂಸ್ಕ್ರತಿಯ ಅನಾವರಣ ತಿಳಿಸಿಕೊಟ್ಟ ಉತ್ತಮ ಕಾರ್ಯಕ್ರಮ ಎಂದರು. 
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ಈ ಸಂದರ್ಭ  ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ  ಗುಣಪಾಲ್ ದೇವಾಡಿಗ ,ಕರ್ನಾಟಕ ಬ್ಯಾಂಕ್ ನ ಪ್ರಬಂಧಕ ಜಯಂತ ಅಮೀನ್ ಕೆಂಜಾರು, ಸಿವಿಲ್ ಕಂಟ್ರಾಕ್ಟರ್ ಸತೀಶ್ ಸಾಲಿಯಾನ್  ಹಾಗೂ ಮೊದಲಾದವರು  ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ  ವಿನೋದ್ ಅರ್ಬಿ  ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಉಷಾಕಿರಣ್ ಸ್ವಾಗತಿಸಿದರು.ಕೃಷ್ಣಾನಂದ ಧನ್ಯವಾದವಿತ್ತರು. ಶಿಕ್ಷಕಿ  ಶ್ರೀಮತಿ ಗೀತಾ ಕಾರ್ಯಕ್ರಮ  ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ,ಪೋಷಕರು ,ಹಳೆವಿದ್ಯಾರ್ಥಿ ಸಂಘದ ಸದಸ್ಯರು ಸೇರಿ ಸುಮಾರು ಒಂದು ಸಾವಿರ ಮಂದಿ ವಿವಿಧ ತಿಂಡಿ ತಿನಿಸುಗಳನ್ನೊಳಗೊಂಡ ಸಹಭೋಜನ ಸವಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ