ಹೆದ್ದಾರಿಯಲ್ಲಿನ ಹೊಂಡಗಳಿಗೆ ಮುಕ್ತಿ,ಬಜಪೆಯ ಕರಾವಳಿ ಟೀಮ್ ನಿಂದ ಶ್ರಮದಾನ
Sunday, July 13, 2025
ಬಜಪೆ:ಕಟೀಲು - ಮಂಗಳೂರು ರಾಜ್ಯ ಹೆದ್ದಾರಿ 67 ರ ಬಜಪೆ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು,ಆಪಾಯಕಾರಿಯಾಗಿ ಪರಿಣಮಿಸಿದೆ.ಹೆದ್ದಾರಿಯಲ್ಲಿ ವಾಹನಗಳ ಸವಾರರು ಹರಸಾಹಸಪಟ್ಟು ಸಂಚರಿಸುವ ಕಷ್ಟವನ್ನು ಅರಿತ ಬಜಪೆಯ ಕರಾವಳಿ ಟೀಮ್ ನ ಅಧ್ಯಕ್ಷ ನಿಸಾರ್ ಕರಾವಳಿ ,ಕರಾವಳಿ ಅಜ್ಮಲ್ ಕೊಳಂಬೆ ಹಾಗೂ ಹಫೀಜ್ ಕೊಳಂಬೆ ನೇತೃತ್ವದಲ್ಲಿ ಬಜಪೆ ರಾಜ್ಯ ಹೆದ್ದಾರಿಯ ಸೃಷ್ಟಿ ಹೋಟೆಲ್ ಮುಂಭಾಗದಲ್ಲಿ ಹೊಂಡಗಳಿಂದ ಹದಗೆಟ್ಟ ರಾಜ್ಯ ಹೆದ್ದಾರಿಯನ್ನು ಶ್ರಮದಾನದ ಮೂಲಕ ಹೊಂಡಗಳನ್ನು ತಾತ್ಕಲೀಕವಾಗಿ ಮುಚ್ಚಿದರು.