Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...





ಯುವ ಜನಾಂಗ ದೇಶದ ಭವಿಷ್ಯ - ಮನೋಜ್ .ಕೆ

ಮೂಲ್ಕಿ:ಯುವ ಜನಾಂಗವು ದೇಶದ ಭವಿಷ್ಯ ಅವರನ್ನು ನಶೆಗಳಿಂದ ದೂರವಿಟ್ಟು ಆರೋಗ್ಯಕರ ಜೀವನ ಶೈಲಿಗೆ ಪ್ರೇರೇಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು  ಕ್ಷಯರೋಗ ಚಿಕಿತ್ಸಾ ಕೇಂದ್ರದ ಯೋಜಿತ ತಡೆಗಟ್ಟುವ ನಿರ್ವಹಣಾ ಸಂಯೋಜಕ  ಮನೋಜ್ ಕೆ  ಹೇಳಿದರು.ಅವರು ದುಶ್ಚಟಗಳಿಂದ ದೂರವಿರುವುದು ಹೇಗೆ ಹಾಗೂ ಇದರಿಂದ ಆರೋಗ್ಯದ ಮೇಲೆ ಬೀರುವಂತಹ ಪರಿಣಾಮದ ಬಗ್ಗೆ  ಮೂಲ್ಕಿಯ  ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ   8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ   ಉಪನ್ಯಾಸ ನೀಡಿದರು.
ಶಾಲಾ ಆಡಳಿತ ಅಧಿಕಾರಿ ಶ್ರೀಮತಿ ಮಂಜುಳಾ ಕೆ .ವಿ ದಿಕ್ಸೂಚಿ ಭಾಷಣ ಮಾಡಿದರು. ಶ್ರೀಮತಿ ಲೋಲಾಕ್ಷಿ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು.
 ಭಾರತ್ ಸ್ಕೌಟ್ ಗೈಡ್ ಸಂಸ್ಥೆ"ಗುರು ಜ್ಯೋತಿ" ವಿಭಾಗದ ಮಕ್ಕಳಿಂದ ಮಾದಕ ದ್ರವ್ಯದ  ಅರಿಯು ಮೂಡಿಸುವ  ರೂಪಕ ಕಾರ್ಯಕ್ರಮ ನಡೆಯಿತು. 

ಶಾಲಾ ಪ್ರಾಂಶುಪಾಲ ಯತೀಶ್ ಅಮೀನ್ ಸ್ವಾಗತಿಸಿದರು.ಎಲ್ಲಾ ಅಧ್ಯಾಪಕರ ಮಾರ್ಗದರ್ಶನ ದೊಂದಿಗೆ ಗೈಡ್ ಕ್ಯಾಪ್ಟನ್ ಶ್ರೀಮತಿ ಸಾವಿತ್ರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಲೇಡಿ ಸ್ಕೌಟ್ ಮಾಸ್ಟರ್ ಕುಮಾರಿ ವಿದ್ಯಾಶ್ರೀ ವಂದಿಸಿದರು.