ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಆಟೋರಿಕ್ಷಾ
Monday, June 9, 2025
ಕಿನ್ನಿಗೋಳಿ :ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಕಿನ್ನಿಗೋಳಿಯ ಕೊಲ್ಲೂರುಪದವು ತಿರುವಿನಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕನು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೂಲ್ಕಿ ಕಡೆಯಿಂದ ಕುಕ್ಕಟ್ಟೆ ಕಡೆಗೆ ಪ್ರಯಾಣಿಕರನ್ನು ಕರೆತರಲು ಹೋಗುತ್ತಿದ್ದಾಗ ಕೊಲ್ಲೂರುಪದವು ತಿರುವಿನಲ್ಲಿ ಆಟೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು,ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.