ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಕುಪ್ಪೆಪದವು ಶಾಲಾ ಪ್ರಾರಂಭೋತ್ಸವ
Tuesday, June 3, 2025
ಕೈಕಂಬ:ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಕುಪ್ಪೆಪದವು ಇಲ್ಲಿನ ಶಾಲಾ ಪ್ರಾರಂಭೋತ್ಸವಕ್ಕೆ ವಿದ್ಯಾ ವರ್ಧಕ ಸಂಘ (ರಿ.) ಕುಪ್ಪೆಪದವು ಇದರ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಚಾಲನೆಯನ್ನು ನೀಡಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಧೀರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಾಜದ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯ ಮುಖ್ಯ ವಾಹಿನಿಗೆ ಬಂದು, ಕಲಿಕೆಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು. ಸಮಾಜದ ಏಳಿಗೆಗಾಗಿ ಶಾಂತಿ ಸಾಮರಸ್ಯದಿಂದರಬೇಕು. ಭವಿಷ್ಯದಲ್ಲಿ ವಿವಿಧ ಕಾರ್ಯಕ್ಷೇತ್ರದಲ್ಲಿದ್ದರೂ ದೇಶ ಸೇವೆಗೆ ಬದ್ದರಾಗಬೇಕು ಎಂದರು.
ಶಿಕ್ಷಣ ತಜ್ಞರು ಹಾಗೂ ದಾನಿ ಭೋಜರಾಜ್ ಜೈನ್ ಮಾತನಾಡಿ ಉತ್ತಮ ಶಾಲಾ ಫಲಿತಾಂಶಕ್ಕಾಗಿ ಸಮಿತಿ ಮತ್ತು ಶಿಕ್ಷಕರನ್ನು ಅಭಿನಂದಿಸಿರು. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಮಾರ್ಗದಶರ್ನನ ನೀಡಿದಾಗ ಸಮಾಜದಲ್ಲಿ ಅವರು ಉನ್ನತ ಸ್ಥಾನಕ್ಕೆ ಸ್ಥಾನಕ್ಕೆ ಏರಬಹುದು ಎಂದರು. ಇದೇ ಸಂಧರ್ಭದಲ್ಲಿ ಎಸ್. ಎಸ್.ಎಲ್.ಸಿ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅವರು ವಯಕ್ತಿಕವಾಗಿ ನಗದು ಬಹುಮಾನ ಮತ್ತು ಎಸ್.ಡಿ.ಎಂಸಿ ವತಿಯಿಂದ ಸುಧೀರ್ ಕುಮಾರ್ ಜೈನ್ ಅವರು ಪುರಸ್ಕಾರ ಹಾಗೂ ಸನ್ಮಾನವನ್ನು ನೀಡಿ ಗೌರವಿಸಿದರು.
ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಶೇಖ್ ಅಬ್ದುಲ್ಲಾರವರು ಪ್ರೌಢಶಾಲೆಯ ಬೆಳವಣಿಗೆಗೆ ಸಹಕರಿಸಿ ದವರ ದಾನಿಗಳನ್ನು ಸ್ಮರಿಸುತ್ತಾ, ಹೊಸದಾಗಿ ಆಸ್ತಿತ್ವಕ್ಕೆ ಬಂದಿರುವ ವಿದ್ಯಾವರ್ಧಕ ಸಮಿತಿಯ ಉದ್ದೇಶಗಳನ್ನು ಈಡೇರಿಸಲು ಹಾಗೂ ಶಾಲಾಭಿವ್ರದ್ದಿಗೆ ಸಹಕರಿಸುವಂತೆ ವಿನಂತಿಸಿದರು.
ಮನೋಹರ ಶೆಟ್ಟಿ ಮಾತನಾಡಿ ಪ್ರಕ್ರತಿಯನ್ನು ಆರಾಧಿಸುವ ಮೂಲಕ ಅದರ ಕೊಡುಗೆಯನ್ನು ಸದ್ಬಳಕೆ ಮಾಡಬೇಕು. ದಾನಿಗಳ ನೆರವಿನಿಂದ ಶಾಲೆಯನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎಂಬ ದಢ ಉದ್ದೇಶವಿದ್ದಾಗ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ.
ಮುಖ್ಯ ಶಿಕ್ಷಕ ಬಾಬು ಪಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಶೈಕ್ಷಣಿಕ ವರ್ಷದಲ್ಲಿ ನಡೆಯಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ನುಡಿದರು. ನಮ್ಮ ಶಾಲೆ ನಮ್ಮ ಜವಾಬ್ದಾರಿ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆ, ಪ್ರಕೃತಿ ವಿಕೋಪ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು. ಹಿರಿಯ ಶಿಕ್ಷಕ ಮಾರ್ಕ್ ಮೆಂಡೊನ್ಸಾರವರು ಸ್ವಾಗತಿಸಿದರು. ಶ್ರೀಮತಿ ವಿಮಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಉಷಾ ವಂದನಾರ್ಪಣೆ ಮಾಡಿದರು.
ಎಸ್.ಡಿ.ಎಂ.ಸಿ ಸದಸ್ಯರಾದ ತಿಮಪ್ಪ ಶೆಟ್ಟಿ ಅಗರಿ, ಶಶಿಧರ್ ಶೆಟ್ಟಿ, ಸುಂದರ್ ಶಾಂತಿ, ಶ್ರೀಮತಿ ಬೇಬಿ, ಶಿಕ್ಷಕರಾದ ಶ್ರೀಮತಿ ತುಳಸಿ, ಉದಯ ಕುಮಾರ್, ಶ್ರೀಮತಿ ನೇತ್ರ ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.