-->

ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಏಳನೇ ಮೇಳದ ಆರಂಭೋತ್ಸವ
ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಮೌಲ್ಯಯುತ ವ್ಯಕ್ತಿಗಳಾಗಿ ಬಾಳಿ - ಫಾ.ಅಂಡ್ರ್ಯೂ ಡಿ ಸೋಜ

ಮೌಲ್ಯಯುತ ವ್ಯಕ್ತಿಗಳಾಗಿ ಬಾಳಿ - ಫಾ.ಅಂಡ್ರ್ಯೂ ಡಿ ಸೋಜ

ಬಜಪೆ: ಸಂತ ಜೋಸೆಫರ ಪದವಿಪೂರ್ವ ಕಾಲೇಜು ಬಜ್ಪೆ ಇಲ್ಲಿನ ಪ್ರೌಢಶಾಲಾ ವಿಭಾಗದ
2025-26 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘ ದ ಮಹಾಸಭೆ ಹಾಗೂ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನೆರವೇರಿತು.ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಸಂಸ್ಥೆಯ ಸಂಚಾಲಕ ವಂದನೀಯ ಫಾ .ಆಂಡ್ರ್ಯೂ ಡಿ'ಸೋಜಾ  ಅವರು  ಹೆತ್ತವರ ಪರಿಶ್ರಮಕ್ಕೆ ಬೆಲೆ ಕೊಡಿ,ಮೌಲ್ಯಯುತ ವ್ಯಕ್ತಿಗಳಾಗಿ ಬಾಳಿ  ಎಂದರು.
ಶಿಕ್ಷಕ ಅಲ್ವಿನ್ ನೊರೊನ್ಹಾ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ 2025-26 ನೇ ಸಾಲಿನ ಶಿಕ್ಷಕ ರಕ್ಷಕ ಸಂಘ ಹಾಗೂ ಅಮ್ಮಂದಿರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.ಶಿಕ್ಷಕ ಅಶ್ವಥ್ ನಿಡ್ಡೋಡಿ ನೂತನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
2025-26ರ ಶಿಕ್ಷಕ ರಕ್ಷಕ ಸಂಘದ ನೂತನ ಉಪಾಧ್ಯಕ್ಷರಾಗಿ  ಮ್ಯಾಕ್ಸಿಮ್ ಪಿಂಟೋ, ಅಮ್ಮಂದಿರ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಶರ್ಮಿಳಾ ಸಿ ಪೂಜಾರಿ ಮರು ಆಯ್ಕೆಯಾದರು. ಇತ್ತೀಚೆಗೆ ಬೇರೆ ಶಾಲೆಗೆ ವರ್ಗಾವಣೆಗೊಂಡ  ಸಂಸ್ಥೆಯ ಹಿರಿಯ ಶಿಕ್ಷಕಿ ಶ್ರೀಮತಿ ಮೋಲಿ ಲೋಬೋ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ದಿ.ಜೊಸ್ಸಿ ಡಿಲ್ಮಾ ಇವರ ಸ್ಮರಣಾರ್ಥ ಇವರ ಮಗಳು ಡೊರೆತಿ ಡಿಲ್ಮಾ ಇವರು ಕೊಡ ಮಾಡುವ ನಗದು ಪುರಸ್ಕಾರವನ್ನು ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ನೀಡಿ ಪುರಸ್ಕರಿಸಲಾಯಿತು. ಶ್ರೀ ರೆಜಿನಾಲ್ಡ್ ಪಿರೇರಾ ಕಾಮತ್ ಬಜ್ಪೆ ಇವರು ತಮ್ಮ ತಂದೆ ದಿ. ವಿಲಿಯಂ ಪಿರೇರಾ ಹಾಗೂ ತಾಯಿ   ದಿ. ಮೇರಿ ಪಿರೇರಾ ಇವರ ಸ್ಮರಣಾರ್ಥ ಕೊಡ ಮಾಡುವ ರೂಪಾಯಿ 10,000 ನಗದು ಪುರಸ್ಕಾರವನ್ನು ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಇಯಾನ್ ರೆನ್ವಿಲ್ ಮಾಥಾಯಸ್ ಇವರಿಗೆ ನೀಡಿ ಪುರಸ್ಕರಿಸಲಾಯಿತು. ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಶಿಕ್ಷಕಿ ಅಜಿತ ಕುಮಾರಿ ಲೋಬೋ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು.

ಶಿಕ್ಷಕಿ ಶ್ರೀಮತಿ ಶಿಲ್ಪ ಶ್ರೀ ಶೆಟ್ಟಿ ಎಂ.
ಸ್ವಾಗತಿಸಿದರು.  ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶ್ರೀ ಲ್ಯಾನ್ಸಿ ಡಿ'ಸೋಜಾ  ವರದಿ ವಾಚಿಸಿದರು. ಶಿಕ್ಷಕಿ ಶ್ರೀಮತಿ ವಂದನ ಧನ್ಯವಾದಗೈದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ