Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಕಾರ್ಯ - ಜ್ಯೋತಿರಾಜ್

ಬಜಪೆ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್  ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿನ   ಶಾಲಾ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿ ಸಂಘ (ರಿ ) ಕರಂಬಾರು ಮತ್ತು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು  ಇವರ ಪ್ರಾಯೋಜಕತ್ವದಲ್ಲಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಉಚಿತ ಸಮವಸ್ತ್ರ ವಿತರಣೆ ನಡೆಯಿತು.
 ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ( ರಿ )   ನ  ಕಾರ್ಯನಿರ್ವಹಣಾಧಿಕಾರಿ  ಶ್ರೀಮತಿ ಜ್ಯೋತಿರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ಕರಂಬಾರು ಹಳೆ ವಿದ್ಯಾರ್ಥಿ ಸಂಘದ ಸಾಧನೆ ರಾಜ್ಯಕ್ಕೆ ಮಾದರಿ, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ  ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಸತೀಶ್ ದೇವಾಡಿಗ ವಹಿಸಿದ್ಧರು.
ಈ ಸಂದರ್ಭ  ಬ್ಯಾಂಕ್ ಆಫ್ ಬರೋಡ ಬಜಪೆ ಶಾಖೆಯ ಮ್ಯಾನೇಜರ್ ನಾಗವರಪ್ರಸಾದ್, ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ( ರಿ.) ನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ,  ಯುವವಾಹಿನಿ(ರಿ.) ಕೆಂಜಾರು ಕರಂಬಾರು ಘಟಕದ ಮಾಜಿ ಅಧ್ಯಕ್ಷ ಜಿತೇಶ್ ಸಾಲ್ಯಾನ್ ,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ  ಗುಣಪಾಲ್ ದೇವಾಡಿಗ, 
 ಕರಂಬಾರು  ಹಳೆ ವಿದ್ಯಾರ್ಥಿ ಸಂಘದ  ಅಧ್ಯಕ್ಷ ರಾಕೇಶ್ ಕುಂದರ್, ಕರಂಬಾರು. ಪ್ರಧಾನ ಕಾರ್ಯದರ್ಶಿ  ಪ್ರವೀಣ್ ಆಚಾರ್ಯ,ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಲಾವಣ್ಯ,
ಶ್ರೀಮತಿ ನೇತ್ರಾಕ್ಷಿ ಹಾಗೂ ಮೊದಲಾದವರು  ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಕಿರಣ ಸ್ವಾಗತಿಸಿದರು.
 ಶ್ರೀಮತಿ ಗೀತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು,
ಶ್ರೀಮತಿ ಮಾಲಾಶ್ರೀ ವಂದಿಸಿದರು.