-->

ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಏಳನೇ ಮೇಳದ ಆರಂಭೋತ್ಸವ
ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ

ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ

ಬಜಪೆ:ಗ್ರಾಮದಲ್ಲಿನ  ಅಭಿವೃದ್ದಿ ದೇವಸ್ಥಾನದ ಮೂಲಕವೇ ಅಗಲಿ.ಸನಾತನ ಸಂಸ್ಕೃತಿ ಉಳಿಯಲು ಹಿಂದೂ ಸಂಸ್ಕೃತಿಯನ್ನು ಬಲಿಷ್ಟ ಗೊಳಿಸುವ   ಕಾರ್ಯದ ಮೂಲಕ ಸಾಧ್ಯ   ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಅವರು ಪೆರ್ಮುದೆ ಶ್ರೀ ಸೋಮನಾಥೇಶ್ವರ  ದೇವಸ್ಥಾನದ ವಠಾರದಲ್ಲಿ ಸುಮಾರು 7 ಕೋ.ರೂ ವೆಚ್ಚದಲ್ಲಿ ಪೆರ್ಮುದೆ ಶ್ರೀಸೋಮನಾಥೇಶ್ವರ ದೇವಸ್ಥಾನದ ಅಭಿವೃದ್ದಿ ,ದೇವಸ್ಥಾನದ ಕಾಂಕ್ರೀಟ್ ರಸ್ತೆ,ತಡೆಗೋಡೆ ನಿರ್ಮಾಣ ಹಾಗೂ ಪೆರ್ಮುದೆ ಕೆನರಾಬ್ಯಾಂಕ್ ಸಮೀಪದಿಂದ ದೇವಸ್ಥಾನದ ತನಕ ಡಾಮರೀಕರಣ ಗೊಂಡ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ  ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಅವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪೆರ್ಮುದೆ ಶ್ರೀಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶೇಖರ್ ಶೆಟ್ಟಿ  ಕಲ್ಪವೃಕ್ಷ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ವೇಳೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಏಳುವರೆ ಕೋ.ರೂ ಅನುದಾನವನ್ನು ನೀಡಿದ ಶಾಸಕ ಉಮಾನಾಥ ಕೋಟ್ಯಾನ್,ಅಭಿವೃದ್ದಿ ಕಾರ್ಯಗಳನ್ನು ನಡೆಸಿಕೊಟ್ಟ ಗುತ್ತಿಗೆದಾರ ಸುಧಾಕರ ಶೆಟ್ಟಿ ದಂಪತಿಯನ್ನು ,50 ವರ್ಷಗಳಿಂದ ಹೆಚ್ಚು ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕ ವೇದವ್ಯಾಸ ರಾವ್ ಹಾಗೂ ಪದ್ಮಿನಿ ರಾವ್  ದಂಪತಿ   ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಮಸ್ಥರಿಂದ ಅಭಿನಂದಿಸಲಾಯಿತು.

ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಸಾದ್,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್, ಕೋರಿಯಾರ್, ಎಂ ಅರ್ ಪಿ ಎಲ್ ನ ಚೀಪ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್ ಎ, ದೇವಸ್ಥಾನದ ಅರ್ಚಕ ರಾಘವೇಂದ್ರ ರಾವ್ ,ಪೆರ್ಮುದೆ ಗ್ರಾ.ಪಂ ಉಪಾಧ್ಯಕ್ಷ ಸಂದೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಲ್ಲಾಸ್ ಅರ್ ಶೆಟ್ಟಿ ಸ್ವಾಗತಿಸಿದರು.ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಗಿರೀಶ್ ಶೆಟ್ಟಿ ಧನ್ಯವಾದವಿತ್ತರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ