ಮೇ.9 ರಂದು ಕಿನ್ನಿಗೋಳಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ
Wednesday, May 7, 2025
ಕಿನ್ನಿಗೋಳಿ:ಯಕ್ಷಧ್ರುವ ಪಟ್ಲ ಫೌಂಡೇಶನ್ ಜಗತ್ತಿನಾದ್ಯಂತ ಘಟಕಗಳನ್ನು ಸ್ಥಾಪನೆ ಮಾಡಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.ಅವರು ಕಿನ್ನಿಗೋಳಿಯ ಸಮೃದ್ದಿ ಸಭಾಭವನದಲ್ಲಿ ನಡೆದ ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿದರು.ಮೇ.9 ರಂದು ಕಿನ್ನಿಗೋಳಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಿನ್ನಿಗೋಳಿ ಘಟಕವು ಕಿನ್ನಿಗೋಳಿಯ ಶ್ರೀಸಾರ್ವಜನಿಕ ಗಣೇಶೋತ್ಸವದ ಮಂಟಪದ ಬಳಿ ಉದ್ಘಾಟನೆಗೊಳ್ಳಲಿದೆ.ಮುಂಬೈಯ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಯವರು ಕಿನ್ನಿಗೋಳಿ ಘಟಕವನ್ನು ಉದ್ಘಾಟಿಸಲಿದ್ದಾರೆ.ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ,ಶ್ರೀಕ್ಷೇತ್ರ ಮುಂಡ್ಕೂರಿನ ಪ್ರಧಾನ ಅರ್ಚಕ ವೇದಮೂರ್ತಿ ರಾಮದಾಸ ಆಚಾರ್ಯ ಹಾಗೂ ಶ್ರೀಕ್ಷೇತ್ರ ಸುರಗಿರಿಯ ಪ್ರಧಾನ ಅರ್ಚಕ ವೇದಮೂರ್ತಿ ವಿಶ್ವೇಶ್ವರಭಟ್ ಆಶೀರ್ವಚನ ನೀಡಲಿದ್ದಾರೆ.ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಶಶಿಧರ ಬಿ.ಶೆಟ್ಟಿ,ಕೆ.ಎಮ್ ಶೆಟ್ಟಿ ಮಧ್ಯಗುತ್ತು,ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ,ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು,ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,ಮಲ್ಲಿಕಾ ಯಶವಂತ ಶೆಟ್ಟಿ ಬಳಕುಂಜಗುತ್ತು,ಧನಂಜಯ ಶೆಟ್ಟಿಗಾರ್ ದುಬೈ,ಉದ್ಯಮಿಗಳು,ಪ್ರಮುಖರುಗಳು ಹಾಗೂ ಗಣ್ಯಾತೀಗಣ್ಯರುಗಳು ಉಪಸ್ಥಿತಲಿರುವರು.ಕಾರ್ಯಕ್ರಮದಲ್ಲಿ ಸಾಧಕ ಕಲಾವಿದರಿಗೆ ಗೌರವಾರ್ಪಣೆ,ಆಶಕ್ತರಿಗೆ ವೈದ್ಯಕೀಯ ನೆರವು ಹಸ್ತಾಂತರ,ಸಾಧಕ ಸಮಾಜ ಸೇವಕರ ಸನ್ಮಾನ,ಯಕ್ಷಗಾನ ಗಾನ ವೈಭವ ಹಾಗೂ ಪಾವಂಜೆ ಶ್ರೀಜ್ಙಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿಮಹಾತ್ಮೆ ಎಂಬ ಯಕ್ಷಗಾನ ಹಾಗೂ ಅನ್ನಸಂತರ್ಪಣೆಯು ನಡೆಯಲಿದೆ.ಸಂಜೆ 3 ಗಂಟೆಗೆ ಕಿನ್ನಿಗೋಳಿಯ ಯುಗಪುರುಷದಿಂದ ಪಾವಂಜೆ ಮೇಳದ ದೇವರನ್ನು ರಂಗಸ್ಥಳದ ಚೌಕಿಯ ತನಕ ವಿಜೃಂಭಣೆಯ ಮೆರವಣೆಗೆಯು ನಡೆಯಲಿದೆ ಎಂದು ಹೇಳಿದರು.
ಹವ್ಯಾಸಿ ಕಲಾವಿದರ ನೆಲೆಯಲ್ಲಿ ಹವ್ಯಾಸಿ ಭಾಗವತ ಜಗನ್ನಾಥ ಶೆಟ್ಟಿ ಮಮ್ಮೆಟ್ಟು,ಸಾಧಕರ ನೆಲೆಯಲ್ಲಿ ಸಮಾಜ ಸೇವಕ ಸುಧಾಕರ ಸಾಲ್ಯಾನ್ ಸಂಕಲಕರಿಯ,ಕಲಾವಿದರ ನೆಲೆಯಲ್ಲಿ ಪಾವಂಜೆ ಮೇಳದ ಹಿಮ್ಮೇಳ ಕಲಾವಿದ ಗುರುಪ್ರಸಾದ್ ಬೊಳಿಂಜಡ್ಕ ಅವರನ್ನು ಸನ್ಮಾನಿಸಲಾಗುವುದು.ವಿನೋದ ತಾಳಿಪಾಡಿಯವರಿಗೆ ವೈದ್ಯಕೀಯ ನೆರವನ್ನು ಈ ವೇಳೆ ನೀಡಲಾಗುವುದು ಎಂದರು
.
ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ ಮಾತನಾಡಿ ಯಕ್ಷಗಾನಕ್ಷೇತ್ರ ಸಹಿತ ಇತರ ಕ್ಷೇತ್ರಗಲ್ಲಿನ ಕಲಾವಿದರನ್ನು ಗುರುತಿಸಿ ಸಹಾಯ ಹಸ್ತ ನೀಡುತ್ತ ಬಂದಿರುವ ಸಂಸ್ಥೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಆಗಿದೆ.ಆಶಕ್ತರಿಗೆ ನೆರವು,ವಿದ್ಯಾಭ್ಯಾಸದ ಸಹಿತ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿರುವ ಫೌಂಡೇಶನ್ ನ ಕಾರ್ಯ ಶ್ಲಾಘನೀಯವಾದುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ನೂತನ ಕಿನ್ನಿಗೋಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ,ಗೌರವ ಮಾರ್ಗದರ್ಶಕ ಭುವನಾಭಿರಾಮ ಉಡುಪ, ಸಂಚಾಲಕ ಪೃಥ್ವಿರಾಜ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ಕರ್ಕೇರ, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ ಮುಂಡೂರು ದೊಡ್ಡ ಮನೆ, ಜೊತೆ ಕೋಶಾಧಿಕಾರಿ ದಿನೇಶ್ ಆಚಾರ್ಯ, ಕಾರ್ಯಕಾರಿ ಸಮಿತಿಯ ಸುರೇಶ್ ಶೆಟ್ಟಿ, ಮಾಧ್ಯಮ ಸಮಿತಿಯ ಶರತ್ ಶೆಟ್ಟಿ, ನಿಶಾಂತ್ ಶೆಟ್ಟಿ ಕಿಲೆಂಜೂರು ಉಪಸ್ಥಿತರಿದ್ದರು.