
ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ಗೆ ಶೇ.100 ಫಲಿತಾಂಶ.
Tuesday, May 13, 2025
ಕಿನ್ನಿಗೋಳಿ:ಸಿಬಿಎಸ್‌ಇ 10 ನೇ ತರಗತಿಯಲ್ಲಿ
ಶಿಮಂತೂರಿನ ಶ್ರೀ ಶಾರದ ಸೊಸೈಟಿ ಆಡಳಿತಕ್ಕೆ ಒಳಪಡುವ ಶಿಮಂತೂರಿನ ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿಮಂತೂರಿನ ಶ್ರೀ ಶಾರದ ಸೊಸೈಟಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮತ್ತು ಎಲ್ಲಾ ನಿರ್ದೇಶಕರು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.