ಮಂಗಳೂರು-ಬಜ್ಪೆ ಸರ್ಕಾರಿ ಬಸ್ ಪುನರ್ ಆರಂಭಿಸಲು ಒತ್ತಾಯಿಸಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಯಿಂದ ಮನವಿ
Tuesday, May 13, 2025
ಬಜಪೆ:ಮಂಗಳೂರಿನಿಂದ ಬಜ್ಪೆಗೆ ಬರುತ್ತಿದ್ದ ಕೆಎಸ್ ಅರ್ ಟಿಸಿ ಬಸ್ ಗಳನ್ನು ಪುನರಾರಂಭಿಸಬೇಕು ಅಲ್ಲದೆ ಬಸ್ ಸಂಚಾರವನ್ನು ಕಟೀಲ್ ವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರಿಗೆ ಮನವಿಯನ್ನು ನೀಡಿದರು.ಈ ಬಗ್ಗೆ ಕೆಎಸ್ ಅರ್ ಟಿ ಸಿಯ ಡಿಸಿ ಯವರಾದ ರಾಜೇಶ್ ಶೆಟ್ಟಿ ಸ್ಪಂದನೆ ನೀಡಿದ್ದು, ನಾಗರಿಕರ ಬೇಡಿಕೆ ಬಗ್ಗೆ ಚರ್ಚಿಸಿ ಕೂಡಲೇ ನಿಲ್ಲಿಸಿದ ಬಸ್ ನ್ನು ಪುನರಾರಂಭಿಸುವ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ,ಸಹ ಸಂಚಾಲಕ ಇಸ್ಮಾಯಿಲ್ ಎಂಜಿನಿಯರ್ , ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ ದೇವದಾಸ್,ಗ್ಯಾರಂಟಿ ಅನುಷ್ಠಾನದ ಅಲೆಸ್ಟರ್ ಡಿಕುನ್ಹಾ ,ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ,ಕಾಂಗ್ರೆಸ್ ಮುಖಂಡರಾದ ವಿಕಾಸ್ ಶೆಟ್ಟಿ ,ಕಾರ್ಪೊರೇಟರ್ ಸತೀಶ್ ಪೆಂಗಲ್ ,ಹಿರಿಯರಾದ ಮೊನಕ ,ಅನ್ವರ್ ರಝಕ್ ಬಜ್ಪೆ ,ಬಿ.ಹೆಚ್.ಅಬ್ದುಲ್ ಖಾದರ್ ,ಕುಡುಬಿ ಸಮಾಜದ ನಾಯಕರಾದ ಶೇಖರ್ ಗೌಡ,ಅದ್ದು ಬಜ್ಪೆ ,ಮಹಿಳಾ ನಾಯಕಿ ವಿಜಯ ಗೋಪಾಲ ಸುವರ್ಣ, ಕಂದಾವರ ಗ್ರಾ ಪಂ ಸದಸ್ಯರಾದ ಶಾಂತ,ಅನಿವಾಸಿ ಉದ್ಯಮಿ ಅಬ್ಬಾಸ್,ಆಫ್ನನ್ ,
ಶಾಯಿದ್ ಉಪಸ್ಥಿತರಿದ್ದರು.