
ಕಟೀಲು ಪದವಿ ಕಾಲೇಜಿನ ವಾರ್ಷಿಕೋತ್ಸವ
Tuesday, May 13, 2025
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆಯಿತು. ದೇಗುಲದ ಅನುವಂಶಿಕ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣನವರು ಆಶೀರ್ವಚನ ನೀಡಿ ಸಾಧಕರನ್ನು ಸನ್ಮಾನಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಸಿಎ ಅಶೋಕ್ ರಾವ್, ಸಿಎ ಚರಣ್ ರಾಜ್ ಮುಚ್ಚೂರು, ರವಿರಾಜ್ ಪೂಜಾರಿ; ಪಿ.ಎಚ್.ಡಿ. ಪುರಸ್ಕೃತರಾದ ಕಾಲೇಜಿನ ಉಪನ್ಯಾಸಕಿ ಡಾ.ವನಿತಾ ಶೆಟ್ಟಿಂ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಪನ್ಯಾಸಕ ಪ್ರದೀಪ್ ಡಿ. ಎಂ., ಕಾಲೇಜಿನ ಬಿ.ಎ. ರ‍್ಯಾಂಕ್ ವಿಜೇತ ಹಿರಿಯ ವಿದ್ಯಾರ್ಥಿನಿಯರಾದ ಕುಮಾರಿ ಚೋಂದಮ್ಮ ಎಂ.ಎಂ., ಕುಮಾರಿ ಅನನ್ಯಾ; ಚಿನ್ನದ ಪದಕ ವಿಜೇತ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕುಮಾರಿ ಮೋಕ್ಷಾ ಬಿ., ಎಂ.ಎ. ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ ಕುಮಾರಿ ಸಂಧ್ಯಾ ಎಚ್., ಕ್ರೀಡಾ ವಿಭಾಗದಲ್ಲಿ ಸಾಧನೆಯನ್ನು ಮಾಡಿದ ಕುಮಾರಿ ಶ್ರೇಯಾ ಮತ್ತು ಕುಮಾರಿ ಗಾಯತ್ರಿ ಕುಲಾಲ್ ಇವರನ್ನು ಸನ್ಮಾನಿಸಲಾಯಿತು.
ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ ಬದಿಯಡ್ಕ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರುಗಳಾದ ಎಂ. ಬಾಲಕೃಷ್ಣ ಶೆಟ್ಟಿ ಹಾಗೂ ಕೇಶವ್‌ಎಚ್. ನಿವೃತ್ತ ಉಪನ್ಯಾಸಕರಾದ ಜಗದೀಶ್ಚಂದ್ರ ಕೆ.ಕೆ., ನಿವೃತ್ತ ಗ್ರಂಥಪಾಲಕ ಗಣೇಶ್ ದೇವಾಡಿಗ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪ್ರಾಂಶುಪಾಲ ಡಾ.ವಿಜಯ ವಿ. ವಿದ್ಯಾರ್ಥಿ ನಾಯಕರಾದ ಶಶಾಂಕ್, ಆದಿತ್ ಆರ್. ಶೆಟ್ಟಿ, ಮನೀಶ್ ಮತ್ತು ತ್ರಿಶಾ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಪದ್ಮನಾಭ ಮರಾಠೆ ಸ್ವಾಗತಿಸಿದರು. ವಿದ್ಯಾರ್ಥಿನಿ ಯೋಗಿನಿ ಸುಷ್ಮಾ ಅತಿಥಿಗಳ ಪರಿಚಯ ಮಾಡಿದರು, ಉಪನ್ಯಾಸಕಿ ಶ್ರೀಮತಿ ಲತಾಶ್ರೀ ಧನ್ಯವಾದ ಸಮರ್ಪಣೆ ಮಾಡಿದರು. ಕುಮಾರಿ ಪ್ರಾಂಜಲಿ ಕುಮಾರಿ ಗಾಯತ್ರಿ ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.