ದೇವಾಡಿಗ ಸಂಘದ ಕಟ್ಟಡದ ಅನುದಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ - ಮಿಥುನ್ ರೈ
Tuesday, May 27, 2025
ಹಳೆಯಂಗಡಿ:ರಾಜ್ಯಕ್ಕೆ ದಕ್ಷ ಮುಖ್ಯಮಂತ್ರಿಯನ್ನು ನೀಡಿದ ಸಮುದಾಯ ದೇವಾಡಿಗ ಸಮುದಾಯ.ಈಗಾಗಲೇ ನಿರ್ಮಿಸುತ್ತಿರುವ ಸಮುದಾಯ ಭವನಕ್ಕಾಗಿ ಸಲ್ಲಿಸಿದ ಮನವಿಯನ್ನು ಪರಿಶೀಲಿಸುವೆ. ಸರಕಾರದ ಹಂತದಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಸರಕಾರದ ಅನುದಾನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಹೇಳಿದರು.ಅವರು ಹಳೆಯಂಗಡಿಯ ಪಾವಂಜೆ ದೇವಾಡಿಗ ಸಂಘದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಎಚ್ ವಸಂತ್ ಬೆರ್ನಾಡ್ , ಪ್ರಮುಖರಾದ ಯಾದವ ದೇವಾಡಿಗ ,ಜನಾರ್ದನ ಪಡುಪಣಂಬೂರು, ರಾಮದಾಸ ಪಾವಂಜೆ, ಭಾಸ್ಕರ್ ಅರಂದು, ರಮೇಶ್ ಕುಮಾರ್ ದೇವಾಡಿಗ ತೋಕೂರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಸ್ವಾಗತಿಸಿದರು.