
ಬೈಕ್ ಗೆ ಕಂಟೈನರ್ ಲಾರಿ ಡಿಕ್ಕಿ ,ಓರ್ವ ಸಾವು
Sunday, May 18, 2025
ಮೂಲ್ಕಿಯ ಸೈಂಟ್ ಅ್ಯನ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಕೇರಳ ಮೂಲದ ಸುಗಾಂದ್ (21) ಸಾವನ್ನಪ್ಪಿದ್ದು, ಇನ್ಸಾಫ್ (21) ಗಾಯಗೊಂಡವರು. ಸುಗಾಂಧ್ ಬೈಕ್ ನ ಹಿಂಬದಿ ಸವಾರರಾಗಿದ್ದು,ಇನ್ಸಾಫ್ ಸವಾರರಾಗಿದ್ದರು.ಗಾಯಗೊಂಡ ವಿದ್ಯಾರ್ಥಿಗಳಿಬ್ಬರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು,ಗಂಭೀರವಾಗಿ ಗಾಯಗೊಂಡ ಸುಗಾಂಧ್ ಅವರು ಸಾವನ್ನಪ್ಪಿದ್ದು,ಇನ್ಸಾಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಕಂಟೈನರ್ ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುತ್ತಿತು. ಬೈಕ್ ಸುರತ್ಕಲ್ ಕಡೆಯಿಂದ ಮೂಲ್ಕಿ ಕಡೆಗೆ ಸಂಚರಿಸುತ್ತಿತ್ತು.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.