ಗುರುಪುರ ಗೋಳಿದಡಿಗುತ್ತಿನಲ್ಲಿ ವರ್ಸೋದ ಪರ್ಬೊ ಸಂಪನ್ನ
Monday, May 19, 2025
ಕೈಕಂಬ:ಗುರುಪುರ ಗೋಳಿದಡಿಗುತ್ತಿನಲ್ಲಿ ವರ್ಸೋದ ಪರ್ಬೊವು ಮೇ.15 ರ ಬುಧವಾರದಿಂದ ಮೇ.17 ರ ಶನಿವಾರದ ತನಕ ಸಂಭ್ರಮದಿಂದ ನಡೆಯಿತು.ವೇದಕೃಷಿಕ ಬ್ರಹ್ಮಋಷಿ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್ ನಿತ್ಯಾನಂದ ಗುರುಗಳ ಮಾರ್ಗದರ್ಶನ ಹಾಗೂ ಗುರುಪುರ ಗೋಳಿದಡಿಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ನೇತೃತ್ವದಲ್ಲಿ ಮೇ.15 ರ ಬುಧವಾರದಂದು ಆರಂಭಗೊಂಡ ವರ್ಸೊದ ಪರ್ಬೋ ವು ಮೇ 17 ರ ಶನಿವಾರದಂದು ಸಂಪನ್ನಗೊಂಡಿತು.
ಶನಿವಾರದಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ತನಕ ಜಿಲ್ಲೆಯ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ,ಮಧ್ಯಾಹ್ನ 2:30 ರಿಂದ ಸಂಜೆ 5 ರ ತನಕ ಕಲಾರತ್ನ ಶ್ರೀ ಶಂ.ನಾ .ಅಡಿಗ ,ಕುಂಬ್ಳೆ ಯವರಿಂದ 'ಭೂ ಕೈಲಾಸ ' ಹರಿಕಥಾ ಪ್ರವಚನ,ಸಂಜೆ 5 ರಿಂದ 6 ರ ತನಕ ಬೆಂಗಳೂರಿನ ವೇದಾಂತಿ ಡಾ.ಬಿ.ವಿ ಕುಮಾರಸ್ವಾಮಿಯವರಿಂದ ಭಗವದ್ಗೀತಾ ಪ್ರವಚನ ಹಾಗೂ ರಾತ್ರಿ 8 ರಿಂದ 10 ರ ತನಕ ಅರೆಹೊಳೆ ಪ್ರತಿಷ್ಠಾನದವರಿಂದ ನೃತ್ಯ ವೈಭವವು ನಡೆಯಿತು.ಗುತ್ತುದ ಪರ್ಬೋದ ಮೂರು ದಿನವು ಉಪಹಾರ ಹಾಗೂ ಅನ್ನಸಂತರ್ಪಣೆಯು ನಡೆಯಿತು.
ಈ ಸಂದರ್ಭ ಗುರುಪುರ ಗೋಳಿದಡಿಗುತ್ತಿನ ಯಜಮಾನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ,ಶ್ರೀಗುರು ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ ನ (ರಿ) ನ ಕಾರ್ಯದರ್ಶಿ ಉಷಾ ಪ್ರಸಾದ ಶೆಟ್ಟಿ ,ಸರ್ವ ಟ್ರಸ್ಟಿಗಳು,ಪ್ರಮುಖರುಗಳು,ಗುತ್ತಿನ ಪ್ರಮುಖರುಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.