ಬಡಗ ಎಕ್ಕಾರು ಪ್ರೌಢಶಾಲೆ ತಂಡ ದಕ್ಷಿಣ ಭಾರತ ವಲಯ ಮಟ್ಟದ ಖೋ ಖೋ ಪಂದ್ಯಾಟಕ್ಕೆ ಆಯ್ಕೆ
Tuesday, May 6, 2025
ಬಜಪೆ:ಎಚ್‌ಸಿಎಲ್ ಫೌಂಡೇಶನ್ ಅರ್ಪಿಸುವ ಸ್ಪೋರ್ಟ್ಸ್ ಫಾರ್ ಚೇಂಜ್ 7ನೇ ಆವೃತ್ತಿಯ ಕರ್ನಾಟಕ ರಾಜ್ಯಮಟ್ಟದ ಕ್ರೀಡಾಕೂಟವು ಮೂಡಬಿದಿರೆಯಲ್ಲಿ ನಡೆಯಿತು.ಕ್ರೀಡಾ ಕೂಟದಲ್ಲಿ
16 ವರ್ಷ ವಯೋಮಾನದ ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯ ಬಾಲಕಿಯರ ತಂಡವು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜಯಿಯಾಗಿದೆ.ತಂಡವು ಉಡುಪಿ ಜಿಲ್ಲೆಯನ್ನು ಒಂದು ಇನ್ನಿಂಗ್ಸ್ ಅಂತರದಲ್ಲಿ ಸೋಲಿಸಿ ಬೆಂಗಳೂರಿನ ವಿದ್ಯಾನಗರದಲ್ಲಿ ಜೂನ್ 5 ಮತ್ತು 6 ರಂದು ನಡೆಯುವ ದಕ್ಷಿಣ ಭಾರತ ವಲಯ ಮಟ್ಟಕ್ಕೆ ಆಯ್ಕೆಯಾಗಿದೆ.
ಅಥ್ಲೆಟಿಕ್ಸ್ ವಿಭಾಗದಲ್ಲಿ
ಭೂಮಿಕಾ ಹೆಗ್ಡೆ 100 ಮೀಟರ್ ಪ್ರಥಮ ಸ್ಥಾನ, ಲಾಂಗ್ ಜಂಪ್ ದ್ವಿತೀಯ, ರಿಲೇ ಪ್ರಥಮ ಸ್ಥಾನ,ಲಾಂಗ್ ಜಂಪ್ ಮೂರನೇ ಸ್ಥಾನ,ಸೃಜನ್ ಶೆಟ್ಟಿ 100 ಮೀಟರ್ ಪ್ರಥಮ,ದರ್ಶಿನಿ ಆರ್ ಕುಲಾಲ್ 800 ಮೀಟರ್ ಪ್ರಥಮ, ಕೀರ್ತನ್ 800 ಮೀಟರ್ ತೃತಿಯ, ರಿಲೇ ಪ್ರಥಮ, ಗೌತಮ್ 3000 ಮೀಟರ್ ತೃತೀಯ, ಮೌಲ್ಯ ಆರ್ ಶೆಟ್ಟಿ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ ಪ್ರಶಸ್ತಿ ಪಡೆದು ದಕ್ಷಿಣ ಭಾರತ ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರದ ಶ್ರೀಮತಿ ವಿದ್ಯಾಲತಾ ಇವರು ತರಬೇತಿಯನ್ನು ನೀಡಿರುತ್ತಾರೆ. ಡಾ. ಅನಿತ್ ಕುಮಾರ್ ತಂಡದ ವ್ಯವಸ್ಥಾಪಕರಾಗಿದ್ದರು.