-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಮಧ್ಯರಾತ್ರಿ ಮಹಿಳೆಯರು,ಯುವತಿಯರು ಇರುವ ಮನೆಗೆ ನುಗ್ಗಿ ದರ್ಪ ಬೇಡ: ಡಾ.ಭರತ್ ಶೆಟ್ಟಿ

ಮಧ್ಯರಾತ್ರಿ ಮಹಿಳೆಯರು,ಯುವತಿಯರು ಇರುವ ಮನೆಗೆ ನುಗ್ಗಿ ದರ್ಪ ಬೇಡ: ಡಾ.ಭರತ್ ಶೆಟ್ಟಿ


ಮಂಗಳೂರು: ಮಹಿಳೆಯರು, ಹೆಣ್ಣು ಮಕ್ಕಳು , ವಿದ್ಯಾರ್ಥಿಗಳು ಇರುವ ಹಿಂದೂ ಕುಟುಂಬದ ಮನೆಗಳಿಗೆ ಮಧ್ಯರಾತ್ರಿ ನುಗ್ಗಿ ದರ್ಪ ತೋರಿಸುತ್ತಿರುವ ಪ್ರವೃತ್ತಿಯನ್ನು ಪೊಲೀಸ್ ಇಲಾಖೆ ತಾಕ್ಷಣ ನಿಲ್ಲಿಸಬೇಕು. ಉದ್ವಿಗ್ನತೆಯನ್ನು ನಿಲ್ಲಿಸುವ ಬದಲು ಇಲಾಖೆ ಹೆಚ್ಚಿಸಬಾರದು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾಕ್ಟರ್ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ. 

ಕೊಲೆಯ ಸಂಚು ಗೊತ್ತಿದ್ದರೂ ಸುಹಾಸ್ ಶೆಟ್ಟಿ ಅವರ ಕೊಲೆಯನ್ನು ತಪ್ಪಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಇದೀಗ ತನ್ನ ತಪ್ಪನ್ನ, ವೈಫಲ್ಯವನ್ನ ಮರೆಮಾಚುವ ಸಲುವಾಗಿ ಸಿಕ್ಕಿದವರನ್ನೆಲ್ಲಾ ಜೈಲಿಗೆ ತಳ್ಳುವ ಮೂಲಕ ದರ್ಪದ ಪ್ರವೃತಿ, ಮೆರೆಯುತ್ತಿದೆ. ವಿನಾಕಾರಣ ಕಿರುಕುಳ ನೀಡುವುದನ್ನ ಮಧ್ಯರಾತ್ರಿ ಮನೆಗೆ ನುಗ್ಗುವುದನ್ನು ತಕ್ಷಣ ನಿಲ್ಲಿಸಬೇಕು.
ಹಿಂದೂ ಕುಟುಂಬ ಎಲ್ಲಿ ತಮ್ಮ ಮಕ್ಕಳಿಗೆ ಕಂಟಕ ಎದುರಾಗುವುದೋ ಎಂದು ಆತಂಕದಲ್ಲಿ ಇರುವಾಗ ,ಪೊಲೀಸರು ಕಿರುಕುಳ ನೀಡುವುದು ಸರಿಯಲ್ಲ. ತಕ್ಷಣ ಈ ದಿಮಾಕು ತೋರುವುದನ್ನು ಬಿಡಿ. ಇಲ್ಲದಿದ್ದಲ್ಲಿ  ಮಂಗಳೂರು ನಗರದಾದ್ಯಂತ ಇರುವ ಪೊಲೀಸ್ ಠಾಣೆಯ ಮುಂಭಾಗ ಹಗಲು ರಾತ್ರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ