ಗಿಡಗಳಿಗೆ ಕ್ಯೂಆರ್ ಕೋಡ್ ಫಲಕವನ್ನು ಅಳವಡಿಸುವುದರ ಮೂಲಕ ವಿಶ್ವ ಭೂ ದಿನಾಚರಣೆ
Tuesday, April 22, 2025
ಬಜಪೆ:ಬಡಗ ಎಕ್ಕಾರಿನ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಇಕೋ ಕ್ಲಬ್ ನ ವತಿಯಿಂದ ವಿಶ್ವ ಭೂ ದಿನವನ್ನು ಶಾಲಾ ಆವರಣದಲ್ಲಿರುವ ಗಿಡಗಳಿಗೆ ಕ್ಯೂ ಅರ್ ಕೋಡ್ ಫಲಕವನ್ನು ಆಳವಡಿಸುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಈಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಎನ್ ರಾವ್, ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ರಮ್ಯಾ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆ, ಶಿಕ್ಷಕರಾದ ಶ್ರೀಮತಿ ವಿದ್ಯಾ ಗೌರಿ, ಶ್ರೀಮತಿ ವಿದ್ಯಾಲತಾ, ಡಾ. ಅನಿತ್ ಕುಮಾರ್ ಇವರು ಉಪಸ್ಥಿತರಿದ್ದರು.
ಯ ಬಗೆಗಿನ ಮಾಹಿತಿಗಳನ್ನು
ನೀಡಿದರು.
ಶಾಲಾ ವಿದ್ಯಾರ್ಥಿಗಳು ಶಾಲಾ ಪರಿಸರದಲ್ಲಿರುವ ರೆಂಜೆ, ಹಲಸು, ಅಂಜೂರ, ಪೇರಳೆ, ಬಾಳೆ ಕಹಿಬೇವು ಮುಂತಾದ ಮರಗಳ ಮಾಹಿತಿಗಳನ್ನು ಸಂಗ್ರಹಿಸಿ, ಅದರ ಪಿಡಿಎಫ್ ಅನ್ನು ತಯಾರಿಸಿ, ಡ್ರೈವ್ನಲ್ಲಿ ಅಪ್ಲೋಡ್ ಮಾಡಿ ಪ್ರತಿಯೊಂದು ಮರಗಳಿಗೆ ಅದರದೇ ಆದ ಕ್ಯೂಆರ್ ಕೋಡ್ ನ್ನು ಜನರೇಟರ್ ಮಾಡಿ ಆಯಾ ಮರಕ್ಕೆ ಅಂಟಿಸಿದರು.ಇಂತಹ ಚಟುವಟಿಕೆಗಳನ್ನ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತ ಇರುವ ಗಿಡಗಳಿಗೆ ಈ ಕ್ಯೂಆರ್ ಕೋಡ್ ಗಳನ್ನು ಜನರೇಟ್ ಮಾಡಿ ಅಂಟಿಸುವುದರಿಂದ ಗಿಡದ ಬಗ್ಗೆ ಪರಿಚಯ ಇಲ್ಲದ ಜನರಿಗೆ ಸುಲಭವಾಗಿ ಸಸ್ಯಗಳ ಪರಿಚಯ ಉಂಟಾಗುತ್ತದೆ.