ಕಟೀಲು ಜಾತ್ರೆ ,ಶ್ರೀದೇವರ ಉತ್ಸವ ಬಲಿ
Wednesday, April 16, 2025
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ.13 ರಿಂದ ಎ.20 ರ ತನಕ ವರ್ಷಾವಧಿ ಜಾತ್ರಾ ಮಹೋತ್ಸವವು ನಡೆಯಲಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು, ಶ್ರೀದೇವರ ಬಲಿ ಉತ್ಸವವು ನಡೆಯಿತು.
ಇಂದು ದೀಪದ ಬಲಿ, ಎ.17 ರಂದು ಬೆಳ್ಳಿ ರಥೋತ್ಸವ, ಎ.18 ರಂದು ಬ್ರಹ್ಮರ ಸನ್ನಿಧಿಯಲ್ಲಿ ಪರ್ವ, ಪಡುಸವಾರಿ, ಎ.19 ರಂದು ಬೆಳಿಗ್ಗೆ 9:45 ಕ್ಕೆ ರಥೋತ್ಸವ, ರಾತ್ರಿ ಶಯನ, ಎ.20 ರಂದು ಕವಾಟೋದ್ಘಾನೆ, ರಾತ್ರಿ ಆರಟ, ಬ್ರಹ್ಮರಥೋತ್ಸವ, ಸೂಟೆದಾರ ನಡೆಯಲಿದೆ. ಉತ್ಸವದ ಎಲ್ಲ ದಿನಗಳಲ್ಲೂ ಚಿನ್ನದ ಪಲ್ಲಕಿ ಉತ್ಸವ, ಚಿನ್ನದ ರಥೋತ್ಸವ ನಡೆಯುತ್ತದೆ. ಪ್ರತಿ ದಿನ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ಭಜನೆಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸರಸ್ವತೀ ಸದನದಲ್ಲಿ ನಡೆಯಲಿವೆ.