ಎ.16: ಎಕ್ಕಾರಿನಲ್ಲಿ ಸ್ವಾಗತದ್ವಾರ, ಕಟೀಲಿನಲ್ಲಿ ನೂತನ ಬ್ರಹ್ಮರಥಕ್ಕೆ ಚಾಲನೆ
Monday, April 14, 2025
ಕಟೀಲು : ಕಟೀಲು ದೇವಸ್ಥಾನದಲ್ಲಿ ಶಾಸ್ತ್ರೀಯವಾದ ಆರು ಚಕ್ರಗಳ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥಕ್ಕೆ ಮುಹೂರ್ತ, ರಕ್ತೇಶ್ವರೀ ಸಾನ್ನಿಧ್ಯ ಜೀರ್ಣೋದ್ಧಾರಕ್ಕೆ ಚಾಲನೆ ಹಾಗೂ ಎಕ್ಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ವಾಗತ ದ್ವಾರ ಉದ್ಘಾಟನೆ ಎ.16 ರ ಬುಧವಾರ ಬೆಳಿಗ್ಗೆ ನಡೆಯಲಿದೆ.
ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಸೇವಾಕರ್ತರಾದ ಡಿ. ಸುಧಾಕರ ಶೆಟ್ಟಿ, ಅನಿಲ್‌ಕುಮಾರ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ವಾಮಯ್ಯ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಕೂಳೂರು, ಸಚಿನ್ ವಿ. ಶೆಟ್ಟಿ, ಮುಂತಾದವರು ಭಾಗವಹಿಸಲಿದ್ದಾರೆ