ಅದ್ಯಪಾಡಿ:ನೂತನ ಶಾಲಾ ಕೊಠಡಿಗಳ ಉದ್ಘಾಟನೆ
Monday, April 14, 2025
ಅದ್ಯಪಾಡಿ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅದ್ಯಪಾಡಿ ಇಲ್ಲಿ ಎಮ್. ಆರ್. ಪಿ. ಎಲ್ -ಸಿ. ಎಸ್. ಆರ್ ಯೋಜನೆಯಡಿ ಸುಮಾರು 19 ಲಕ್ಷ ಅನುದಾನದಲ್ಲಿ ನಿರ್ಮಿಸಿದ ನೂತನ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ರಾಜಕೀಯ, ಧರ್ಮವನ್ನು ಆವರಣ ಗೋಡೆಯ ಹೊರಗೆ ಇಟ್ಟು ಮಕ್ಕಳು ದೇವರ ಸಮಾನವೆಂದು ಭಾವಿಸಿ, ಪ್ರಬುದ್ಧ ಸಮಾಜವನ್ನು ಮಾಡುವ ಜವಾಬ್ದಾರಿ ನಮ್ಮ ಹಾಗೂ ಶಿಕ್ಷಣ ಸಂಸ್ಥೆಯ ಮೇಲಿದೆ ಎಂದರು.