ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಜಾಗೃತಗೊಳಿಸುವಲ್ಲಿ ಬೇಸಿಗೆ ಶಿಬಿರಗಳು ಪೂರಕ - ಇಂದಿರಾ ಎನ್. ರಾವ್
Monday, April 14, 2025
ಬಜಪೆ:ಬೇಸಿಗೆ ರಜಾ ಸಮಯದಲ್ಲಿ ಮೊಬೈಲ್ ಹಾಗೂ ಟಿವಿಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥ ಮಾಡಿ ಸಾಮಾಜಿಕ ಜಾಲತಾಣಗಳ ದಾಸರಾಗುವ ಬದಲು ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನ ವಿಕಾಸನಗೊಳಿಸಿ ತಮ್ಮಲ್ಲಿರುವ ಸೂಕ್ತ ಪ್ರತಿಭೆಗಳ ಜಾಗೃತಗೊಳಿಸುವಲ್ಲಿ ಈ ಬೇಸಿಗೆ ಶಿಬಿರಗಳು ಪೂರಕವಾಗುತ್ತದೆ ಎಂದು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನ ಶಾಲಾ ಮುಖ್ಯೊಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್ ಹೇಳಿದರು.ಅವರು ಬಜಪೆಯಲ್ಲಿ ಥಂಡರ್ ಗೈಸ್ ಫೌಂಡೇಶನ್ (ರಿ) ಬಜ್ಪೆ ಮಂಗಳೂರು ಇದರ ವತಿಯಿಂದ ಎಂಟು ದಿನಗಳ 'ಕಲರವ ಬೇಸಿಗೆ ಶಿಬಿರ- 2025' ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ಮಾಡ ಅವರು ವಹಿಸಿ ಮಾತನಾಡಿ ಕಳೆದ 31 ವರ್ಷಗಳಿಂದ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿರಿಸಿಕೊಂಡು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ನಿರಂತರ ಅವಕಾಶಗಳನ್ನ ನೀಡಿ ಪೋಷಿಸುವಲ್ಲಿ ಥಂಡರ್ ಗೈಸ್ ಫೌಂಡೇಶನ್ ನ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.
ಈ ಸಂದರ್ಭ ಬಜಪೆಯ ಕಟೀಲೇಶ್ವರೀ ಎಂಟರ್ ಪ್ರೈಸಸ್ ನ ದಿನೇಶ್ ಶೆಟ್ಟಿ ,ಸ್ಟೂಡೆಂಟ್ ಕಾರ್ನರ್ ನ ಸತೀಶ್ ಭಂಡಾರಿ ,ಥಂಡರ್ ಗೈಸ್ ಫೌಂಡೇಶನ್ ನ ಅಧ್ಯಕ್ಷ ಹಾಗೂ ನಿರ್ದೇಶಕ ಸೂರಜ್ ಶೆಟ್ಟಿ
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಡಾ. ಅನಿತ್ ಕುಮಾರ್ ,ಯುವರಾಜ್ ಶೆಟ್ಟಿ, ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಎಸ್ ಶೆಟ್ಟಿ, ಸಲಹೆಗಾರ ದೀಕ್ಷಿತ್ ಮಾಡ, ಸುರೇಶ ಅಡ್ಡೂರು, ಕಾರ್ಯನಿರ್ವಾಹಕರಾದ ನಿಖಿತಾ ಎಂ ಕೆ ಬಜಪೆ , ನಿಖಿಲ್ ಎಂ ಕೆ ಉಪಸ್ಥಿತರಿದ್ದರು.
ಥಂಡರ್ ಗೈಸ್ ಫೌಂಡೇಶನ್ (ರಿ) ಬಜಪೆಯ ಅಧ್ಯಕ್ಷ ಹಾಗೂ ನಿರ್ದೇಶಕ ಸೂರಜ್ ಶೆಟ್ಟಿ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಕಲರವ ಬೇಸಿಗೆ ಶಿಬಿರದಲ್ಲಿ ಮ್ಯಾಜಿಕ್, ಶಾಡೋ ಪ್ಲೇ, ಮಿಮಿಕ್ರಿ ವೈಯಕ್ತಿಕ ನೈರ್ಮಲ್ಯ ಆರೋಗ್ಯ, ವಿದ್ಯಾರ್ಥಿಗಳಲ್ಲಿ ಮೌಲ್ಯ ಪ್ರಜ್ಞೆ, ರಂಗಕಲೆ ಮೇಲ್ ಆರ್ಟ್, ನೆನಪಿನ ಶಕ್ತಿ , ಅವಧಾನ ಕೇಂದ್ರೀಕರಿಸಲು ಯೋಗ, ಚಿತ್ರಕಲೆ, ಈಜು ತರಬೇತಿ, ಮೋಜಿನ ಆಟಗಳು , ಕಾರ್ಯಕ್ರಮ ನಿರೂಪಣೆ, ಉಲ್ಲನ್ ಕ್ರಾಫ್ಟ್, ನೇಚರ್ ಆರ್ಟ್ ಗಳ ಬಗ್ಗೆ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಹಾಗೂ ಸಾರ್ವಜನಿಕ ಸೇವೆ ನೀಡುತ್ತಿರುವ ಸಂಸ್ಥೆಗಳಾದ ಕೆನರಾ ಬ್ಯಾಂಕ್ ಹಾಗೂ ಬಜಪೆಯ ಪೊಲೀಸ್ ಠಾಣೆ ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ತೆರೆಯುವ ಉಳಿತಾಯದ ಬಗ್ಗೆ ಮಾರ್ಗದರ್ಶನ ಹಾಗೂ ಮಕ್ಕಳ ಹಕ್ಕುಗಳು ಹಾಗೂ ಕಾನೂನು ಸಲಹೆಗಳ ಬಗ್ಗೆ ಮಾಹಿತಿಗಳನ್ನು ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಪಡೆದುಕೊಂಡರು.