ಬಾಲ ವಿಕಾಸ ಶಿಬಿರ -2025 ಸಮಾರೋಪ ಸಮಾರಂಭ
ಮೂಲ್ಕಿ:ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಜನ ವಿಕಾಸ ಸಮಿತಿ ಸಹಕಾರದಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಉಚಿತವಾಗಿ ಆಯೋಜಿಸಿದ ಬಾಲ ವಿಕಾಸ ಶಿಬಿರ -2025 ರ ಸಮಾರೋಪ ಸಮಾರಂಭವು ಪುನರೂರಿನ ಶ್ರೀವಿಶ್ವನಾಥ ದೇವಳದ ಸಭಾಂಗಣದಲ್ಲಿ ನಡೆಯಿತು.ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭ ಪುನರೂರು ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಉದ್ಯಮಿ ಅಜಯ್ ಪುರುಷೋತ್ತಮ,ವಿಜಯ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಅರುಣಾ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಪದಾಧಿಕಾರಿಗಳಾದ ಸುರೇಶ್ ರಾವ್ ನೀರಳಿಕೆ, ದಾಮೋದರ ಶೆಟ್ಟಿ ಕೊಡೆತ್ತೂರು, ಆನಂದ ಮೇಲಾಂಟ, ಗೀತಾ ಶೆಟ್ಟಿ, ಶೋಭಾ ರಾವ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ 102 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು,ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಶಿಬಿರಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿದ ಯೋಗ ಗುರು ಜಯ ಮುದ್ದು ಶೆಟ್ಟಿ, ಶ್ಲೋಕ ಕಂಠಪಾಠ ಮಾಡಿಸಿದ ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಹೆಜಮಾಡಿ, ಅಭಿನಯ ತರಬೇತಿಯನ್ನು ನೀಡಿದ ರಂಗನಟ ಹಾಗೂ ನಿರ್ದೇಶಕ ತಾರನಾಥ ಉರ್ವ , ಆವೆ ಮಣ್ಣಿನ ಕಲಾಕೃತಿ ರಚನೆ ಮತ್ತು ಕರಕುಶಲ ತರಬೇತಿಯನ್ನು ನೀಡಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಿ ಫಲಿಮಾರು, ಭಜನೆ ತರಬೇತಿಯನ್ನು ನೀಡಿದ ಖ್ಯಾತ ಗಾಯಕ ಸುರೇಶ್ ಆಚಾರ್ಯ ಹಳೆಯಂಗಡಿಯವರನ್ನು ಸನ್ಮಾನಿಸಲಾಯಿತು.
ಪ್ರಾಣೇಶ್ ಭಟ್ ದೇಂದಡ್ಕ ಧನ್ಯವಾದವಿತ್ತರು. ಹಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.