
ಮೇ.15 - 17 :ಗೋಳಿದಡಿಗುತ್ತಿನಲ್ಲಿ ಶ್ರೀ ಗುರು ಮಹಾಕಾಲೇಶ್ವರಮೂರ್ತಿಯ ಬ್ರಹ್ಮಕಲಶೋತ್ಸವ ,ಎ.25 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ
Wednesday, April 23, 2025
ಬಜಪೆ:ಗುರುಪುರ ಗೋಳಿದಡಿಗುತ್ತಿನ ಮನೆಗೆ ಹತ್ತಿರ, ಫಲ್ಗುಣಿ ನದಿ ತಟದಲ್ಲಿ ತಲೆ ಎತ್ತಿರುವ ಭವ್ಯ ಶ್ರೀ ಗುರು ಮಹಾಕಾಲೇಶ್ವರ ದೇವರ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಮೇ 15ರಿಂದ 17ರವರೆಗೆ ನಡೆಯಲಿದ್ದು, ಎ. 25ರಂದು ಸಂಜೆ 4:15ಕ್ಕೆ ಗುತ್ತಿನ ಚಾವಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳ್ಳಲಿದೆ.
ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಕೆ. ಎಸ್. ನಿತ್ಯಾನಂದ ಅವರ ಮಾರ್ಗದರ್ಶನದಂತೆ ಎ. 25ರಂದು ಸಂಜೆ 3ರಿಂದ 4 ಗಂಟೆವರೆಗೆ ಭಜನಾ ಸಂಕೀರ್ತನೆ ನಡೆಯಲಿದೆ. ಆ ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಗುರು ಮಹಾಕಾಲೇಶ್ವರ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪಂಚಕಲ್ಯಾಣಯುಕ್ತ ಕಲಶದ ರಶೀದಿ ಬಿಡುಗಡೆಗೊಳ್ಳಲಿದೆ.
ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಎ. ಜೆ. ವೈದ್ಯಕೀಯ ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ್ ಜೆ. ಶೆಟ್ಟಿ, ಸುಧೀರ್ ಶೆಟ್ಟಿ ಎಣ್ಮೆಕಜೆ, ಶ್ರೀ ಕ್ಷೇತ್ರ ಪಾವಂಜೆಯ ಧರ್ಮದರ್ಶಿ ಡಾ. ಯಾಜಿ ನಿರಂಜನ ಭಟ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ನಿತಿನ್ ಜೆ. ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು, ಗುರುಪುರ ಪ್ರಖಂಡ ಸಮಿತಿಯ ಅಧ್ಯಕ್ಷ ಚಂದ್ರಹಾಸ ಟಿ. ಅಮೀನ್, ವಿವಿಧ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರು, ಗುತ್ತಿನ ಚಾವಡಿ ಮಿತ್ರರು ಪಾಲ್ಗೊಳ್ಳಲಿದ್ದಾರೆ.