ಕಟೀಲಿನಲ್ಲಿ ಶಿವಾಜಿ ನಾಟಕದ ಪ್ರಥಮ ಪ್ರದರ್ಶನ
Friday, March 7, 2025
ಕಟೀಲು : ಕಟೀಲಮ್ಮನ ಭಕ್ತರ ಸಂಯೋಜನೆಯಲ್ಲಿ ಶಶಿರಾಜ್ ಕಾವೂರ್ ರಚಿತ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನದ ಬಹು ನಿರೀಕ್ಷಿತ ಶಿವಾಜಿ ನಾಟಕದ ಪ್ರಥಮ ಪ್ರದರ್ಶನ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೀಪಬೆಳಗಿಸಿ ಉದ್ಘಾಟಿಸಿ ಕಟೀಲು ದೇವಿ ಹಾಗೂ ಶಿವಾಜಿ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ರಾಷ್ಟ್ರಭಕ್ತಿಯ ಜಾಗೃತಿ ಶಿವಾಜಿ ನಾಟಕದ ಮೂಲಕ ಎಲ್ಲರಲ್ಲೂ ಹೆಚ್ಚಲಿ. ಕಲಾಮಾತೆ ಕಟೀಲಮ್ಮನ ಸನ್ನಿಧಿಯಲ್ಲಿ ಆರಂಭಗೊಂದ ಈ ನಾಟಕ ಎಲ್ಲೆಡೆ ಜಯಭೇರಿ ಬಾರಿಸಲಿ ಎಂದು ಹಾರೈಸಿದರು.
ವಿಜಯಕುಮಾರ್ ಕೊಡಿಯಾಲ್ ಬೈಲ್ . ಶಶಿರಾಜ್ ಕಾವೂರು, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರನಟ ಪೃಥ್ವಿ ಅಂಬರ್, ಎ.ಕೆ.ವಿಜಯ್ ಕೋಕಿಲ.
ಇವರನ್ನು ಗೌರವಿಸಲಾಯಿತು.
ಅರ್ಚಕ ಸದಾನಂದ ಆಸ್ರಣ್ಣ, ಧನಂಜಯ ಶೆಟ್ಟಿಗಾರ್ ದುಬೈ. ಪ್ರಥ್ಬಿರಾಜ ಆಚಾರ್ಯ. ಚಂದ್ರಶೇಖರ ಶೆಟ್ಟಿ ದೊಡ್ಡಯ್ಯ ಮೂಲ್ಯ ಈಶ್ವರ್, ಪ್ರದ್ಯುಮ್ನ ರಾವ್ ಅಭಿಲಾಷ್ ಶೆಟ್ಟಿ ಸುನಿಲ್ ಆಳ್ವ ಮುಂತಾದವರಿದ್ದರು. ಶರತ್ ಶೆಟ್ಟಿ ನಿರೂಪಿಸಿದು. ಎರಡು ಸಾವಿರಕ್ಕೂ ಹೆಚ್ಚು ಮಂದಿ ನಾಟಕ ವೀಕ್ಷಿಸಿದರು.