
ಕಟೀಲು ಪದವಿ ಕಾಲೇಜಿಗೆ ನ್ಯಾಕ್ ಬಿ ಪ್ಲಸ್ ಮಾನ್ಯತೆ
Saturday, March 8, 2025
ಕಟೀಲು : ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಇದರ ಪರಿಶೀಲನಾ ತಂಡವು ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪ್ರಸ್ತುತ ಕಾಲೇಜಿನಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸಿ ಕಾಲೇಜಿಗೆ ಬಿ+ ಮಾನ್ಯತೆಯನ್ನು ನೀಡಿರುತ್ತಾರೆ. ಈ ಮಾನ್ಯತೆಯು ಮುಂದಿನ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ