ಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಗಲು ರಥೋತ್ಸವ
Saturday, February 15, 2025
ಮುಲ್ಕಿ: ಪಡುಪಣಂಬೂರುಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವವು ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಅರ್ಚಕ ವೇದಮೂರ್ತಿ ರಂಗನಾಥ ಭಟ್ ನೇತೃತ್ವದಲ್ಲಿ ಪ್ರಾತಕಾಲ ವಿಶೇಷ ಪ್ರಾರ್ಥನೆ, ನವಕ ಪ್ರಧಾನ, ಅಲಂಕಾರ ಪೂಜೆ, ಬೆಳಿಗ್ಗೆ 10 ಗಂಟೆಗೆ ಮಹಾಪೂಜೆ ನಡೆದು ಉತ್ಸವ ಬಲಿ ಹೊರಟು ಶ್ರೀ ದೇವರ ರಥಾರೋಹಣ , ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ದೇವರಿಗೆ ಹೂವಿನ ಪೂಜೆ, ಬಯನ ಬಲಿ, ಶ್ರೀ ಭೂತ ಬಲಿ, ಕವಾಟ ಬಂಧನ ನಡೆಯಿತು
ಫೆ.16 ಬೆಳಿಗ್ಗೆ ಕವಾಟೋದ್ಘಾಟನೆ,ರಾತ್ರಿ ಶ್ರೀ ದೇವರ ಮಹಾರಥೋತ್ಸವ ಅವಭೃತ ಸ್ನಾನ, ಜಲಕದ ಬಲಿ ಶ್ರೀ ದೈವ ದೇವರ ಭೇಟಿ, ಧ್ವಜಾವರೋಹಣ ನಡೆಯಲಿದೆ.