Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಾರ್ನಾಡ್ ಹರಿಹರ ಶ್ರೀ ವಿಷ್ಣುಮೂರ್ತಿ ದೇವರಿಗೆ ವಿಜೃಂಭಣೆಯ ಬ್ರಹ್ಮಕಲಶೋತ್ಸವ

ಮುಲ್ಕಿ: ಕಾರ್ನಾಡ್ ಹರಿಹರ ಶ್ರೀ ವಿಷ್ಣುಮೂರ್ತಿ ದೇವರಿಗೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಕ್ಷೇತ್ರದ ಅರ್ಚಕ ಹಯಗ್ರೀವ ಪಡ್ಡಿಲಾಯ ನೇತೃತ್ವದಲ್ಲಿ  ಭಾನುವಾರ ಬೆಳಿಗ್ಗೆ 8:15ಕ್ಕೆ ಕುಂಭಲಗ್ನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಶ್ರೀ ದೇವರ ಉತ್ಸವ ಬಲಿ ಪಲ್ಲಪೂಜೆ ವಿಜೃಂಭಣೆಯಿಂದ ನಡೆಯಿತು. 
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು 
ರಾತ್ರಿ ಉತ್ಸವ ಬಲಿ, ಶಯನ, ಶ್ರೀ ಭೂತ ಬಲಿ ಕವಾಟ ಬಂಧನ ನಡೆಯಿತು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ 
 ದೇವಸ್ಥಾನದ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜಾ,ಅಶ್ವಿನಿ ಪೂಂಜಾ, ಆದಿತ್ಯ ಪೂಂಜಾ ,  ಅಪೂರ್ವ ಪೂಂಜಾ, ಸುನಿಲ್ ಆಳ್ವ, ವ್ಯವಸ್ಥಾಪನಾ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರಾದ ಸುನಿಲ್ ಆಳ್ವ,
 ಜೀವನ್ ಶೆಟ್ಟಿ, ವೈ ಎನ್ ಸಾಲ್ಯಾನ್,
ರವಿಕುಮಾರ್, ಶಶೀoದ್ರ ಸಾಲ್ಯಾನ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ, ಹರ್ಷರಾಜ ಶೆಟ್ಟಿ, ಸುರೇಶ್ ರಾವ್, ವಿಷ್ಣುಮೂರ್ತಿ, ಪ್ರವೀಣ್ ಕೋಟ್ಯಾನ್, ಕೃಷ್ಣ ಶೆಟ್ಟಿ, ಉದಯಕುಮಾರ್ ಶೆಟ್ಟಿ ಆದಿಧನ್,ಮತ್ತಿತರರು ಉಪಸ್ಥಿತರಿದ್ದರು.